ರಾಯಚೂರು- ರಾಯಚೂರು ಲೋಕಸಭೆಗೆ ಪಕ್ಷದ ರಾಜಾ ಅಮರೇಶ್ವರನಾಯರನ್ನು ಅಂತಿಮಗೊಳಿಸಿದ್ದು, ಬಂಡಾಯ ಎದ್ದಿರುವ ಮಾಜಿ ಸಂಸದ ಬಿ.ವಿ.ನಾಯಕರೊಂದಿಗೆ ಪಕ್ಷದ ವರಿಷ್ಟರು ಚರ್ಚಿಸಿ ಶಮನಗೊ ಳಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ಅವರಿಂದು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ ಸಹಜವಾಗಿ ಚುನಾವಣೆ ಸ್ಪರ್ಧೆಗೆ ಆಕಾಂಕ್ಷಿಗಳಿರುತ್ತಾರೆ. ಪಕ್ಷ ಟಿಕೇಟ್ ನೀಡದೇ ಇರುವ ಕುರಿತು ಅಸಮಧಾನಗೊಂಡಿರುವ ಬಿ.ವಿ.ನಾಯಕ ಅಭಿಮಾನಗಳ ಸಭೆ ನಡೆಸಿರುವದ ಪಕ್ಷ ವಿರೋಧಿ ಚಟುವಟಿಕೆಯಲ್ಲ. ಸಭೆಯಲ್ಲಿ ಪಕ್ಷದ ಮುಖಂಡರು ವಿರುದ್ದ ಮಾತನಾಡಿಲ್ಲ. ಆಕಾಂಕ್ಷಿಯಾಗಿರುವ ಕುರಿತು ಮಾತ್ರ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಗತ್ತಿನಲ್ಲಿಯೇ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಯಿಂದ ಸ್ಪರ್ಧಿಸಲು ಬಯಸಿರುವದ ತಪ್ಪಲ್ಲ. ಪಕ್ಷದ ಮುಖಂಡರುಗಳು ಇಬ್ಬರನ್ನು ಒಗ್ಗೂಡಿಸಿ ಮಾತುಕತೆ ನಡೆಸಿ ಅಸಮಧಾನ ಸರಿಪಡಿಸಲಿದ್ದಾರೆ. ಬಿ.ವಿ.ನಾಯಕ ಪಕ್ಷದಲ್ಲಿಯೇ ಇದ್ದು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಪಕ್ಷದ ಅಭ್ಯರ್ಥಿ ಗೆಲುವಿಗೆ. ಏ.೩ ರಂದುಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಜಂಟಿ ಕೋರ ಸಮಿತಿ ಸಭೆ ಕರೆಯಲಾಗಿದೆ.ಎರಡುಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಚುನಾವಣೆ ವೇಳೆಯಲ್ಲಿ ಪ್ರಚಾರಕ್ಕೆ ಆಗಮಿಸಲು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಸಿ.ಟಿ.ರವಿ ಸೇರಿದಂತೆ ಅನೇಕರನ್ನು ಆಹ್ವಾನಿಸಲು ರಾಜ್ಯ ಸಮಿತಿಗೆ ಕೋರಿಕೆ ಸಲ್ಲಿಸಲಾಗಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಯಾವುದೇ ವ್ಯಕ್ತಿ ಚುನಾವಣೆಯಲ್ಲ. ದೇಶವನ್ನು ಮತ್ತಷ್ಟು ಬಲಿಷ್ಟಗೊಳಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮ ಅಧಿಕಾರ ತರಲು ಎಲ್ಲರೂ ಒಗ್ಗೂಡಿಕೆಲಸ ಮಾಡಬೇಕಿದೆ. ದೇಶಕ್ಕಾಗಿ ನರೇಂದ್ರ ಮೋದಿ ಆಡಳಿತ ಅವಶ್ಯಕತೆಯಾಗಿರುವದರಿಂದ ಜನತೆ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.