ರಾಯಚೂರು.ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಅಬಕಾರಿ ಅಧಿಕಾರಿಗಳು ಸಿಎಚ್ ಪೌಡರ್ ಮಿಶ್ರಿತ ಸೇಂದಿ ಮಾರಾಟದ ಅಡ್ಡೆ ಮೇಲೆ ದಾಳಿ ನಡೆಸಿ 65 ಸಾವಿರ ಮೌಲ್ಯದ ಕಲಬೆರಿಕೆ ಸೆಂದಿ ಹಾಗೂ ಇತರ ವಸ್ತುಗಳು ಜಪ್ತಿಮಾಡಿಕೊಂಡು ಇಬ್ಬರು ಆರೋಪಗಳನ್ನು ಬಂಧಿಸಿದ್ದಾರೆ.
ನಗರದ ವಾರ್ಡ್ ನಂ.26 ಮಡ್ಡಿಪೇಟೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ರಾಯಚೂರು ಅಬಕಾರಿ ಉಪ ಆಯುಕ್ತ ರಮೇಶ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಸಿಎಚ್ ಪೌಡರ್ ಸೇಂದಿ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದರು,
ನಗರದ ಗದ್ವಾಲ್ ರಸ್ತೆಯ ಮನೆಯೊಂದರಲ್ಲಿ 1000 ಲೀಟರ್ ಸಿಎಚ್ ಪೌಡರ್ ಮಿಶ್ರಿತ ಕಲಬೆರಿಕೆ ಸೇಂದಿ ಪತ್ತೆಯಾಗಿದೆ, ಮನೆಯಲ್ಲೇ ಕಲಬೆರಿಕೆ ಸೇಂದಿ ತಯಾರಿಸುತ್ತಿದ್ದ ಆರೋಪಿಗಳಾದ ಅರ್ಬಾಸ್ ಮತ್ತು ಜಲಾಲ್ ಇಬ್ಬರು ಆರೋಪಿಗಳ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಮುಖ್ಯ ಆರೋಪಿ ವಾಹಿದ್ ತನ್ನ ಪತ್ನಿ ಮತ್ತು ಮಗನೊಂದಿಗೆ ಪರಾರಿಯಾಗಿದ್ದಾನೆ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ದಾಳಿ ವೇಳೆ ಸುಮಾರು 65 ಸಾವಿರ ಮೌಲ್ಯದ ಕಲಬೆರಿಕೆ ಸೇಂದಿ ಹಾಗೂ ಇತರ ವಸ್ತುಗಳು ಜಪ್ತಿ ಹಾಗೂ 1000 ಲೀಟರ್ ಸಿಎಚ್ ಪೌಡರ್ ಮಿಶ್ರಿತ ಸೇಂದಿ ವಶಕ್ಕೆ ಪಡೆದು ನಾಶಪಡಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.