ರಾಯಚೂರು.ನಗರಸಭೆ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿ ರುವ ಘಟನೆ ನಡೆದಿದೆ.
ನಗರದ ಯಕ್ಲಾಸಪೂರ ರಸ್ತೆಯಲ್ಲಿರುವ ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಳೆದ ಎರಡು ದಿನಗಳ ಹಿಂದೆ ಸಣ್ಣ ಪ್ರಮಾಣ ದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಈ ನಿರ್ಲಕ್ಷ್ಯ ವಹಿಸಿ ದ್ದರಿಂದ ಇದೀಗ ಬೆಂಕಿಯು ಸಂಪೂರ್ಣ ತ್ಯಾಜ್ಯ ಘಟಕದಲ್ಲಿ ವ್ಯಾಪಿಸಿದೆ, ಇದರಿಂದ ದಟ್ಟ ಹೊಗೆ ಉಂಟಾಗಿದೆ, ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚಾಗಿ ವಾಸನೆ ಯುಕ್ತ ಹೊಗೆ ಆವರಿಸಿ ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೆಂಕಿ ಹತ್ತಿದ್ದ ರಿಂದ ತ್ಯಾಜ್ಯ ತೆಗೆದಂತೆಲ್ಲಾ ಬೆಂಕಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಬಾರದ ಪರಸ್ಥಿತಿ ನಿರ್ಮಾಣ ವಾಗಿದೆ, ಸ್ಥಳಕ್ಕೆ ಮತ್ತೊಂದು ಅಗ್ನಿಶಾಮಕ ದಳ ವಾಹನ ತೆರಳಿದ್ದು ಹೆಚ್ಚುವರಿ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಹತ್ತಿದ ಬೆಂಕಿ ಇದೀಗ ಹಚ್ಚಿದ್ದರಿಂದ ಹೊಗೆಯು ಗಾಳಿಗೆ ನಗರಪ್ರ ದೇಶದೊಳಗೆ ವ್ಯಾಪಿಸಿತೊಡಗಿದೆ, ಹೊಗೆಯ ದುರ್ವಾಸನೆಗೆ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಸ್ಥಳದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿತ ತಾಪಮಾನ ಹೆಚ್ಚಿದ್ದು, ಇದೀಗ ಬೆಂಕಿ ಹತ್ತಿದ್ದರಿಂದ ಶಾಖ ಮತ್ತಷ್ಟು ಹೆಚ್ಚಾಗಿದೆ.