ರಾಯಚೂರು. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿರುದ್ದ ಪಕ್ಷದಲ್ಲಿ ಉಂಟಾಗಿರುವ ಅಸಮಧಾನ ಸರಿಪಡಿಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಾಧಾ ಮೋಹನ ಅಗರವಾಲ್ ಇಂದು ಪಕ್ಷದ ಪ್ರಮುಖರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮನೆಯಲ್ಲಿ ಭೇಟಿಯಾದ ಪಕ್ಷದ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಮಾತನಾಡುವ ಮೂಲಕ ಅತೃಪ್ತ ಶಮನಗೊಳಿಸುವ ಪ್ರಯತ್ನ ನಡೆಸಿದರು. ಪಕ್ಷದ ಲೋಕಸಭಾ ಸ್ಪರ್ಧಾಂಕ್ಷಿಯಾಗಿರುವ ಬಿ.ವಿ.ನಾಯಕ, ಅಧಿಕೃತ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ,ಕೆ.ಶಿವನಗೌಡ ನಾಯಕ ಸೇರಿದಂತೆ ಅನೇಕ ಪ್ರಮುಖರು ಭಾಗಿಯಾದರು. ಮಾಜಿ ಶಾಸಕ ತಿಪ್ಪರಾಜ ನಿವಾಸಕ್ಕೂ ತೆರಳಿ ಚರ್ಚೆ ನಡೆಸಿದರು. ಪಕ್ಷದ ನಿರ್ಧಾರವನ್ನು ಎಲ್ಲರೂ ಗೌರವಿಸುವಂತೆ ಖಡಕ್ ಎಚ್ಚರಿಕೆಯನ್ನು ಪಕ್ಷದ ನಾಯಕರುಗಳಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಇಂದು ಸಂಜೆ ಪ್ರಮುಖರೊಂದಿಗೆ ಜಿಲ್ಲಾಧ್ಯಕ್ಷ ಡಾ.ಶಿವರಾಜ ಪಾಟೀಲ್ ನಿವಾಸದಲ್ಲಿ ಸಭೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
ಪಕ್ಷಕ್ಕಾಗಿ ಎಲ್ಲೂರು ಒಗ್ಗೂಡಿಸಿ ಕೆಲಸ ಮಾಡಬೇಕು. ವೈಯಕ್ತಿಕ ನಿರ್ದಾರ ತೆಗೆದುಕೊಳ್ಳುವ ಮುಂಚೆ ಯೋಚಿಸಬೇಕು. ಪಕ್ಷ ಎಲ್ಲರಿಗೂ ಗೌರವಿಸುತ್ತದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಅಸಮಧಾನ ಬಿಟ್ಟು ಕೆಲಸ ಮಾಡಲು ತೊಡಗಿಸಿಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಪಕ್ಷದಿಂದಲೇ ಸ್ಪರ್ಧಿಸುವದಾಗಿ ಹೇಳುತ್ತಿರುವ ಮಾಜಿ ಸಂಸದ ಬಿ.ವಿ.ನಾಯಕರಿಗೂ ಸೂಚನೆ ನೀಡಿದ್ದು ಪಕ್ಷ ನಿರ್ಧಾರ ಗೌರವಿಸಿ ಕೆಲಸ ಮಾಡಿ ಪಕ್ಷ ಸರಿಯಾದ ಸ್ಥಾನ ಮಾನ ಒದಗಿಸಲಿದೆ ಎಂದು ಸೂಚಿಸಿದ್ದಾರೆನ್ನಲಾಗಿದೆ.
ಮೇಲ್ನೋಟಕ್ಕೆ ಅತೃಪ್ತಿ ಶಮನಗೊಂಡಿದೆ ಎಂದು ಹೇಳಲಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರವಾಗಿ ಚುನಾವಣಾ ಪ್ರಚಾರ ಕಾರ್ಯ ನಡೆಸುವದಾಗಿ ಬಿ.ವಿ.ನಾಯಕ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.