ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಮುಂಚೆ ಕೆಟ್ಟ ಭಾಷೆ ಬಳಸುತ್ತಿರಲಿಲ್ಲ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಸಹವಾಸ ದೋಷದಿಂದ ಕೆಟ್ಟ ಭಾಷೆ ಬಳಸುವ ಪ್ರವೃತ್ತಿಗೆ ಗುರಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಅವರಿಂದು ನಗರದಲ್ಲಿ ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷವು ದಲಿತರಿಗೆ ಸ್ಥಾನಮಾನ ನೀಡುವ ಉದ್ದೇಶ ಇದ್ದರೇ ಮೊದಲು ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬಹುದಾಗಿತ್ತು ಆದರೇ ಮಾಡಲಿಲ್ಲ. ದಲಿತ ನಾಯಕರನ್ನು ಪ್ರಧಾನಮಂತ್ರಿ ಮಾಡುತ್ತೇವೆ ಎಂಬುದು ಕೇವಲ ಚುನಾವಣೆ ಗಿಮಿನಕ್ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದು ಯಾವುದೇ ಘನತೆಯಲ್ಲ. ಎಐಸಿಸಿ ಕಚೇರಿ ನಿರ್ವಹಣೆಗೆ ನಿಯುಕ್ತಿ ಗೊಳಿಸಿದಂತಾಗಿದೆ. ಈ ರೀತಿಯ ಗಿಮಿಕ್ಗಳಿಗೆ ಜನ ಯಾವುದೇ ಗಮನ ನೀಡುವುದಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸುಳ್ಳುಗಾರ ಎಂದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇಂತಹ ಹೇಳಿಕೆಗಳಿಗೆ ಜನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಚಲನಚಿತ್ರ ನಟರು ಪ್ರಚಾರಕ್ಕೆ ತೆರಳಿದರೂ ಮೈತ್ರಿ ಅಭ್ಯರ್ಥಿ ಮೇಲೆ ಪರಿಣಾಮ ಬಿರುವುದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಗೆದ್ದೆ ಗೆಲ್ಲುತ್ತಾರ. ಸ್ಟಾರ್ ಚಂದ್ರು ಸ್ಟಾರ್ ಇಲ್ಲದ ಚಂದ್ರು ಆಗಿದ್ದಾರೆ ಎಂದು ಲೇವಡಿ ಮಾಡಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಹತ್ತು ವರ್ಷಗಳ ಸಾಧನೆಗೆ ಜನತೆ ಮನ್ನಣೆ ನೀಡಲಿದ್ದು, ಬಿಜೆಪಿ ಪಕ್ಷವು ಮ್ತೆ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
Megha News > Local News > ರಾಹುಲಗಾಂಧಿ ಸಹವಾಸದಿಂದ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೆಟ್ಟಭಾಷೆ ಬಳಸುವ ಚಾಳಿ ಬೆಳದಿದೆ- ಛಲವಾದ ನಾರಾಯಣಸ್ವಾಮಿ
ರಾಹುಲಗಾಂಧಿ ಸಹವಾಸದಿಂದ ಮಲ್ಲಿಕಾರ್ಜುನ ಖರ್ಗೆಯವರಿಗೆ ಕೆಟ್ಟಭಾಷೆ ಬಳಸುವ ಚಾಳಿ ಬೆಳದಿದೆ- ಛಲವಾದ ನಾರಾಯಣಸ್ವಾಮಿ
Tayappa - Raichur18/04/2024
posted on
Leave a reply