ರಾಯಚೂರು. ಇತ್ತೀಚಿನ ದಿವಸಗಳಲ್ಲಿ, ಸಾಮಾಜಿಕ ತಾಣದಲ್ಲಿ ವಿಡಿಯೋಗಳು ವೈರಲ್ ಆಗುತ್ತಿವೆ, ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಷೀರುದ್ದೀನ್ ಅವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ, ಪೊಲೀಸ್ನವರು ಬೂಟ್ನಿಂದ ಹೊಡೆದು ಒಳಗೆ ಹಾಕಬೇಕು”ಎಂದು ಹೇಳಿದರು ಎನ್ನಲಾದ ವಿಡಿಯೋ ಒಂದು, ಇತ್ತೀಚಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಪರಿಶೀಲಿಸಿದಾಗ, ಈ ವೀಡಿಯೋ ದಿ. 30.11.2023 ರಂದು ಚಿತ್ರೀಕರಣವಾದ ಘಟನೆ ಆಗಿದೆ.
ಸಂಪೂರ್ಣ ವೀಡಿಯೋವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ, ಆ ರೀತಿ ಹೇಳಿರುವುದು ಕಂಡು ಬಂದಿರುವುದಿಲ್ಲ, ಜಾಲತಾ ಣದಲ್ಲಿ ಹರಿದಾಡುತ್ತಿರುವ ವೀಡಿಯೋ ಪೂರ್ತಿ ಘಟನೆಯ ವೀಡಿಯೋ ಆಗಿರದೆ, ಕೇವಲ ಘಟನೆಯ ತುಣುಕುಗಳು ಆಗಿವೆ, ಆದ್ದರಿಂದ ಸಾರ್ವಜನಿಕರು ಈ ವಿಷಯದಲ್ಲಿ ಸಾಮರಸ್ಯ ಕಾಪಾಡಬೇಕೇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಅವರು ತಿಳಿಸಿದ್ದಾರೆ.