Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಉಮಾನ್ ದೇಶದಿಂದ ಬಂದು ಮತದಾನ ಮಾಡಿದ ಎನ್ಆರ್‌ಐ

ಉಮಾನ್ ದೇಶದಿಂದ ಬಂದು ಮತದಾನ ಮಾಡಿದ ಎನ್ಆರ್‌ಐ

ರಾಯಚೂರು. ಉಮಾನ್ ದೇಶದ ಮಸ್ಕತ್ ನಿಂದ ರಾಯಚೂರಿಗೆ ಬಂದ ಮತದಾನ ಮಾಡಿ ಮಹತ್ವವನ್ನು ಸಾರಿದ್ದಾರೆ.

ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ನಿವಾಸಿ ಅಮರೇಶ ಅವರು ಕಳೆದ 25 ವರ್ಷಗಳಿಂದ ಉಮಾನ್ ದೇಶದ ಮಸ್ಕತ್ ಪ್ರದೇಶದಲ್ಲಿ ಎನ್‌ಆರ್‌ಐ ಆಗಿ ಮಾಡುತ್ತಿದ್ದಾರೆ,
ದೇಶದಲ್ಲಿ ಲೋಕಸಭಾ ಚುನಾವಣಾ ನಡೆಯು ತ್ತಿರುವ ಹಿನ್ನೆಲೆಯಲ್ಲಿ ಮತದಾನ ಮಾಡಲು ತಮ್ಮ ಗ್ರಾಮಕ್ಕೆ ಬಂದು ಮತದಾನ ಮಾಡಿ ಮತ ದಾನದ ಮಹತ್ವವನ್ನು ಸಾರಿದ್ದಾರೆ.
ಮಸ್ಕತ್ ನಿಂದ ರಾಯಚೂರಿಗೆ ಆಗಮಿಸಲು ಅವರು 3 ಲಕ್ಷ ವೆಚ್ಚ ಮಾಡಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ.
ದಾನಗಳಲ್ಲಿ ಶ್ರೇಷ್ಠದಾನ ಮತದಾನವಾಗಿದೆ, ನಮ್ಮ ಕುಟುಂಬದ ಜೊತೆಗೆ ಆಗಮಿಸಿ ಮತದಾನ ಮಾಡಿದ್ದೇವೆ ಪ್ರತಿಯೊಬ್ಬರು ಮತದಾನದ ಮಹತ್ವವನ್ನು ಅರಿತುಕೊಂಡ ಮತದಾನ ಮಾಡಬೇಕು, ಮತದಾನ ಪ್ರಜಾಪ್ರಭುತ್ವದ ಹಕ್ಕಾಗಿದ್ದು ಆ ಹಕ್ಕನ್ನು ನಾವು ಚಲಾಯಿಸಬೇಕು ಎಂದು ತಿಳಿಸಿದರು.

Megha News