Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಕುಡಿಯುವ ನೀರಿಗಾಗಿ ಡಿಸಿ ಮನೆ ಮುಂದೆ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ

ಕುಡಿಯುವ ನೀರಿಗಾಗಿ ಡಿಸಿ ಮನೆ ಮುಂದೆ ಖಾಲಿಕೊಡ ಪ್ರದರ್ಶಿಸಿ ಪ್ರತಿಭಟನೆ

ರಾಯಚೂರು: ಕುಡಿಯುವ ನೀರಿಗಾಗಿ ಆಗ್ರಹಿಸಿ ನಗರದ ತಿಮ್ಮಾಪೂರ ಪೇಟೆ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಯ ನಿವಾಸಿಗಳು ಖಾಲಿಕೊಡ ಇಡಿದು ಜಿಲ್ಲಾಧಿಕಾರಿ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಹಲವು ದಿನಗಳಿಂದ ಬಡಾವಣೆಗಳಿಗೆ ಸಮರ್ಪಕವಾಗಿ ನೀರು ಸರವರಾಜು ಆಗುತ್ತಿಲ್ಲ, ಪೂರೈಕೆಯಾಗದ ನೀರು ಒದಗಿಸದ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದು ಮಹಿಳೆಯರು ನಗರಸಭೆ ವಿರುದ್ಧ ಖಾಲಿಕೊಡಗಳನ್ನು ಪ್ರದರ್ಶನ ಮಾಡಿ ಆಕ್ರೋಶ ಹೊರ ಹಾಕಿದರು.
ನಿರ್ಲಕ್ಷ್ಯವಹಿಸಿದ ನಗರಸಭೆ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಗರಸಭೆ ಕಚೇರಿಯಿಂದ ಜಿಲ್ಲಾಧಿಕಾರಿ ಮನೆಯವರೆಗೆ ನಿವಾಸಿಗಳು ಆಗಮಿಸಿ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
ಸಮಯಕ್ಕೆ ನೀರು ಬಾರದೇ ಇರುವುದರಿಂದ
ನೀರಿಗಾಗಿ ರಾತ್ರಿಯಿಡೀ ಕಾಯುವ ಪರಸ್ಥಿತಿ ನಿರ್ಮಾಣ ವಾಗಿದೆ. ಸರಬರಾಜು ಮಾಡುವ ನೀರು ಸಹ ಕಲುಷಿತಗೊಂಡಿದೆ, ಎಂದು ನಗರಸಭಾ ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು‌.

Megha News