ದೇವದುರ್ಗ. ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಟಿ.ಡಿ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ರಮೇಶ ₹50 ಸಾವಿರ ಲಂಚ ಪಡೆಯುವ ವೇಳೆ ಶುಕ್ರವಾರ ಲೋಕಾ ಯುಕ್ತರ ಬಲೆಗೆ ಬಿದ್ದಿದ್ದಾರೆ.
ರಾಯಚೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ನೇತೃತ್ವದ ತಂಡದ ದಾಳಿ ನಡೆಸಿ ಲಂಚ ಹಣದೊಂದಿಗೆ ವಶಕ್ಕೆ ಪಡೆದಿದ್ದಾರೆ.
ಗಬ್ಬೂರುಗ್ರಾಮದ ಫಾರೂಕ್ ಎಂಬಾತನಿಂದ 50 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಲೋಕಾ ಯುಕ್ತ ತಂಡ ದಾಳಿ ನಡೆಸಿ ಬಂಧಿಸಿದೆ.
ಮೇ 10ರಂದು ಗಬ್ಬೂರು ಗ್ರಾಮದ ಖಾಸಗಿ ಬ್ಯಾಂಕ್ ಉದ್ಯೋಗಿ ಫಾರೂಕ್‌ನನ್ನು ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ವಶಕ್ಕೆ ಪಡೆದಿದ್ದರು. ಆದರೆ, ಪ್ರಕರಣ ದಾಖಲಿಸದೆ ಇರಲು 3 ಲಕ್ಷ ರೂಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಫಾರೂಕ್ ದೂರಿದ್ದರು.
ಫಾರೂಕ್ ವಿರುದ್ಧ ಕ್ರಿಕೆಟ್ ಬೆಟ್ಟಿಂಗ್ ಕೇಸ್ ದಾಖಲಿಸಿಕೊ-ಳ್ಳದೆ ಇರಲು ಪಿಎಸ್‌ಐ ಮಂಜುನಾಥ ಕಾನ್‌ಸ್ಟೆಬಲ್ ರಮೇಶ ಮೂಲಕ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 3 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ಬಳಿಕ ಫಾರೂಕ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶುಕ್ರವಾರ 50 ಸಾವಿರ ಹಣ ನೀಡುವಾಗ ಕಾನ್‌ಸ್ಟೆಬಲ್ ರಮೇಶ ಸಿಕ್ಕಿಬಿದ್ದಿದ್ದಾನೆ. ಪಿಎಸ್ಐ ಮಂಜುನಾಥ ಮತ್ತು ರಮೇಶ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.ದಾಳಿಯಲ್ಲಿ ಲೋಕಾಯುಕ್ತ ತಂಡದಲ್ಲಿ ಡಿವೈಎಸ್ಪಿ ರಘು ಜಿ, ಇನ್‌ಸ್ಪೆ- ಹಾಗೂ ಕಾಳಪ್ಪ ಇಸ್ಸಪೆಕ್ಟರ್ ಅಮರೇಶ ಹುಬ್ಬಳ್ಳಿ,ಬಡಿಗೇರ ಸಿಬ್ಬಂದಿ ಇದ್ದರು.