Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಯುವಕ ಯುವತಿ ರಸ್ತೆಯಲ್ಲಿಯೇ ಗಲಾಟೆ, ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ ವಿಡಿಯೋ ವೈರಲ್

ಯುವಕ ಯುವತಿ ರಸ್ತೆಯಲ್ಲಿಯೇ ಗಲಾಟೆ, ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ ವಿಡಿಯೋ ವೈರಲ್

ರಾಯಚೂರು. ಯುವಕ ಯುವತಿ ಇಬ್ಬರು ಜಗಳ ಮಾಡಿಕೊಂಡು ಯುವತಿ ಯುವಕನಿಗೆ ಕಾಲರ್ ಪಟ್ಟಿ ಇಡಿದು ಜಾಡಿಸಿ ಒದ್ದಿರುವ ಘಟನೆ ನಗರದ ಸ್ಟೇಷನ್ ರಸ್ತೆಯ ಲೋಕಾಯುಕ್ತ ಪೊಲೀಸ್ ಠಾಣೆ ಎದುರು ನಡೆದಿದೆ‌

ಆರಂಭದಲ್ಲಿ ಯುವಕ ಯುವತಿ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದು, ಯುವಕ ಯುವತಿ ಹೊಡೆದಾಡಿಕೊಂಡಿದ್ದಾರೆ. ಯುವತಿ ಯುವಕನ ಕಾಲರ್ ಪಟ್ಟಿ ಹಿಡಿದ ರಸ್ತೆಯಲ್ಲಿಯೇ ಸಾರ್ವಜನಿಕವಾಗಿ ಜಾಡಿಸಿ ಒದ್ದಿದ್ದಾಳೆ. ಸುತ್ತಮುತ್ತಲಿರುವ ಸಾರ್ವಜನಿಕರು ಸಹ ಬಿಡಿಸಲಿಲ್ಲ ಮುಂದಾಗಿಲ್ಲ, ಜಗಳವಾಡುತ್ತಾ ಹತ್ತಿರವಿರುವ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿ‌ದ್ದಾರೆ. ಈ ವೇಳೆ ಪೊಲೀಸರು ಇಬ್ಬರನ್ನು ಬೈದು ಠಾಣೆಯಿಂದ ಕಳುಹಿಸಿದ್ದಾರೆ.
ಇವರಿಬ್ಬರು ಪರಸ್ಪರವಾಗಿ ಜಗಳ ಮಾಡಿಕೊಂಡರುವ ದೃಶ್ಯವನ್ನು ಸಾರ್ವಜನಿಕರು ನೋಡುತ್ತಾ ನಿಂತಿದ್ದರು. ಇವರಿಬ್ಬರು ಯಾವುದಕ್ಕಾಗಿ ಗಲಾಟೆ ಮಾಡಿಕೊಂಡಿದ್ದರು ಎಂಬುದು ತಿಳಿದು ಬಂದಿಲ್ಲ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Megha News