Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local News

ಬಿರುಕು ಬಿಟ್ಟ ಶಾಲೆಯ ಕಟ್ಟಡ ಗೋಡೆ, ಬೀಳವ ಸ್ಥಿತಿಯಲ್ಲಿ ಮೇಲ್ಚಾವಣಿ ಸಮಸ್ಯೆಗಳಿಗೆ ಮನ್ನಣೆ ನೀಡದ ಸರ್ಕಾರ

ಬಿರುಕು ಬಿಟ್ಟ ಶಾಲೆಯ ಕಟ್ಟಡ ಗೋಡೆ, ಬೀಳವ ಸ್ಥಿತಿಯಲ್ಲಿ ಮೇಲ್ಚಾವಣಿ ಸಮಸ್ಯೆಗಳಿಗೆ ಮನ್ನಣೆ ನೀಡದ ಸರ್ಕಾರ

ರಾಯಚೂರು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶಾಲೆ ದುರಸ್ತಿ ಸೇರಿದಂತೆ ಸಾಕಷ್ಟು ಸಮಸ್ಯೆಗಳ ಮಧ್ಯಯೂ ಸರ್ಕಾರ ಜೂನ್‌ ನಿಂದ ಶಾಲೆಗಳು ಪ್ರಾರಂಭವಾಗಿದ್ದು ಶಾಲೆಯಲ್ಲಿನ ಸಮಸ್ಯೆಗಳಿಗೆ ಮಾತ್ರ ಮನ್ನಣೆ ನೀಡದೇ ಇರುವುದರಿಂದ ವಿದ್ಯಾರ್ಥಿಗಳ ಇದಕ್ಕೆ ಬಲಿ ಯಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು ಶಾಲೆಯು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದೆ, ಶಾಲೆಯಲ್ಲಿನ ಸಣ್ಣ ಪುಟ್ಟ ಕೆಲಸಗಳನ್ನು ಸಹ ದುರಸ್ತಿಗೊಳಿಸಿದೇ ಆರಂಭಿ ಸಿದ್ದರಿಂದ ಮಕ್ಕಳು ಇದಕ್ಕೆ ಬಲಿಯಾಗಬೇಕಿದೆ.
ಶಾಲೆಗಳಲ್ಲಿ ಪರೀಕ್ಷೆ ಮುಗಿದ ಬಳಿಕ ಅವುಗಳ ಕಡೆ ಇಣುಕಿ ನೋಡದೇ ದುರಸ್ತಿ ಯಲ್ಲಿರುವ ಶಾಲೆಗಳನ್ನು ದುರಸ್ತಿಗೊಳಿಸದೇ ಪ್ರಾರಂಭಿಸಿದ್ದಾರೆ.
ಶಾಲೆಯಲ್ಲಿನ ಸಾಕಷ್ಟು ಕಟ್ಟಡಗಳ ಮೇಲ್ಚಾವ ಣಿಯ ಸಿಮೆಂಟ್ ಪದರು ಕಿತ್ತುಹೋಗಿದ್ದು, ವಿದ್ಯಾರ್ಥಿಗಳ ಮೇಲೆ ಬೀಳುವ ಸ್ಥಿತಿದೆ, ಶಾಲೆಯಲ್ಲಿ ಮೇಲೆ ನೋಡಿಕೊಂಡು ಪಾಠ ಕೇಳಿವ ಅನಿವಾರ್ಯತೆ ಏದುರಾಗಿದೆ. ಮಳೆಗಾಲ ಆರಂಭವಾಗಿದ್ದು, ಮೇಲ್ಚಾವಣಿ ಕುಸಿಯುವ ಹಂತದಲ್ಲಿವೆ, ಗೋಡೆಯು ಬಿರುಕುಗೊಂಡಿವೆ, ಕಂಬಗಳಲ್ಲಿ ಅಲ್ಲಲ್ಲಿ ಬಿರುಕು ಉಂಟಾಗಿ ಇಂದು ಅಥವಾ ನಾಳೆ ಬೀಳುವ ಸ್ಥಿತಿಯಲ್ಲಿವೆ.
ಮಳೆಗಾಲವಾಗಿದ್ದರಿಂದ ಶಾಲೆಯ ಆವರಣದಲ್ಲಿ ನೀರು ಸಂಗ್ರಹವಾಗಿ ತರಗತಿ ಕೊಠಡಿಗಳಿಗೆ ನುಗ್ಗುತ್ತಿವೆ, ವಿದ್ಯಾರ್ಥಿಗಳು ಇದರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ‌.
ಊಟ ಮಾಡಲು ಸಹ ತರಗತಿಯಲ್ಲಿ ಮಾಡ ಬೇಕಾಗಿದೆ, ಆವರಣದಲ್ಲಿ ನೀರು ಸಂಗ್ರಹವಾಗಿ ದ್ದರಿಂದ ನೀರು ಹೊರ ಹೋಗಲು ವ್ಯವಸ್ಥೆ ಇಲ್ಲದಂತಾಗಿದೆ.
ಈ ಶಾಲೆಯಲ್ಲಿ ಸುಮಾರು 360 ವಿದ್ಯಾರ್ಥಿಗ ಳಿದ್ದು, 6 ಜನ ಶಿಕ್ಷಕರಿದ್ದಾರೆ, ಮಕ್ಕಳಿಗೆ ಅನುಗು ಣವಾಗಿ ಶಿಕ್ಷಕರಿಲ್ಲ, ಕೊರತೆ ಎದುರಾಗಿದೆ. ಹಿಂದಿ ಶಿಕ್ಷಕರಂತು ಮೊದಲೇ ಇಲ್ಲವಾಗಿದ್ದಾರೆ, ಈ ಹಿಂದೆ ಅತಿಥಿ ಶಿಕ್ಷಕರು ಇದ್ದರು ಈಗ ಅವರೂ ಇಲ್ಲದಂತಾಗಿದೆ, ಸರ್ಕಾರ ನೇಮಕಾತಿಗೆ ಆದೇಶ ಮಾಡಿದ್ದು ಇನ್ನು ಕಾಯುವ ಸ್ಥಿತಿ ಇದೆ‌.

* ಶಾಲೆಯಲ್ಲಿನ ಕಟ್ಟಡದ ಮೇಲ್ಚಾವಣಿ ಬೀಳುವ ಸ್ಥಿತಿಯಲ್ಲಿದ್ದು, ಮೇಲೆ ನೋಡಿ ಪಾಠ ಕೇಳಬೇಕಾಗಿದೆ. ಕಟ್ಟಡದಲ್ಲಿ ಬಿರುಕುಗಳಿದ್ದು ದುರಸ್ತಿಗೊಳಿಸಬೇಕು.
ವಿದ್ಯಾರ್ಥಿ ಮಲ್ಲಿಕಾರ್ಜುನ

* ಶಾಲೆಯಲ್ಲಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಪಿಡಿಒ, ಶಿಕ್ಷಣ ಇಲಾಖೆ ಗಮನಕ್ಕೆ ತಂದಿದೆ, ಅನುದಾನವಿಲ್ಲವೆಂದು ದುರಸ್ಥಿಗೆ ಮುಂದುಡುತ್ತಾ ಬಂದಿದ್ದಾರೆ

ಬಸಲಿಂಗಪ್ಪ
ಎಸ್‌ಡಿಎಂಸಿ ಅಧ್ಯಕ್ಷ

Megha News