Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಕಾಡು ಹಂದಿ ಬೇಟೆಯಾಡಿದ ಲಿಂಗಸೂಗುರು ಮೂಲದ ಇಬ್ಬರ ಬಂಧನ

ಕಾಡು ಹಂದಿ ಬೇಟೆಯಾಡಿದ ಲಿಂಗಸೂಗುರು ಮೂಲದ ಇಬ್ಬರ ಬಂಧನ

ರಾಯಚೂರು. ಅರಣ್ಯ ಪ್ರದೇಶದಲ್ಲಿ ಕಾಡು ಹಂದಿಯನ್ನು ಬೇಟೆಯಾಡಿದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಬೇಟೆಯಾ ಡಿದ ಆರೋಪಿಗಳು ಲಿಂಗಸೂಗೂರು ತಾಲೂಕಿನ ಸೋಮೇಶ್ ಮತ್ತು ಅಂಬರೀಶ್ ಎಂಬುವವರು ಎಂದು ತಿಳಿದು ಬಂದಿದೆ.
ಚಿತ್ತಾಪುರ ತಾಲೂಕಿನ ಮುಡಬೂಳ್ ಗ್ರಾಮದ ಹತ್ತಿರ ಕಾಡು ಹಂದಿಯ ಭೇಟೆಯಾಡಿ ಬೊಲೆರೊ ವಾಹನದಲ್ಲಿ ರಾಯಚೂರ ಕಡೆಗೆ ತೆಗೆದುಕೊಂಡು ಹೋಗುತ್ತಿರುವಾಗ ಕರ್ತವ್ಯ ನಿರತ ಬೀಟ್ ಪೊಲೀಸರು ತಪಾಸಣೆ ನಡೆಸಿದಾಗ ಕಾಡು ಹಂದಿ ಮತ್ತು ಬೇಟೆಯಾಡಲು ತಂದ ಸಲಕರಣೆಗಳು ಪತ್ತೆಯಾಗಿವೆ.
ಚಿತ್ತಾಪೂರ ಪೋಲಿಸ್ ಠಾಣೆಯ ಪೋಲಿಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಜೆಎಂಎಫ್‌ಸಿ ನ್ಯಾಯಾಧೀಶರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

Megha News