ರಾಯಚೂರು-ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿ.25 ರಂದು ಮೊಹ್ಮದ್ ಹಮೀದ್ ಖಾನ್
ತೀವ್ರ ಹೃದಯಘಾತದಿಂದ ಬಳಲುತ್ತಿದ್ದ ಇವರನ್ನು ಚಿಕೆತ್ಸೆಗಾಗಿ ನಗರದ ವಿಜಯ್ ಕುಲಕರ್ಣಿ ಆಸ್ಪತ್ರೆಯಲ್ಲಿ ದಾಖಲೆಯಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೊಹ್ಮದ್ ಹಮೀದ್ ಖಾನ್ ಮೃತಪಟ್ಟಿದ್ದು,ವೈದ್ಯರು ಚಿಕೆತ್ಸೆ ನೀಡುವಲ್ಲಿ ಸಂಪೂರ್ಣ ವಿಫಲದಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದರು.ವಿಜಯ ಪಾಲಿಕ್ಲೀನಿಕ್ ಮಾಲೀಕ ಡಾ.ಅಜಿತ್ ವಿ ಕುಲಕರ್ಣಿ ಅವರು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅವರ ದೂರು ಅನ್ವಯ ಮೂರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನಿಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ನಿಖಿಲ್ ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Megha News > Crime News > ವೈದ್ಯರ ಮೇಲೆ ಹಲ್ಲೆ: ಮೂರು ಜನ ಆರೋಪಿ ಬಂಧನ
ವೈದ್ಯರ ಮೇಲೆ ಹಲ್ಲೆ: ಮೂರು ಜನ ಆರೋಪಿ ಬಂಧನ
Tayappa - Raichur28/06/2024
posted on
Leave a reply