ರಾಯಚೂರು.ಸಕಾರಾತ್ಮಕ ಚಿಂತನೆ, ಉತ್ತಮ ಶಿಕ್ಷಣ, ಸರಿಯಾದ ಸಂದೇಶ ಮತ್ತು ಸರಿಯಾದ ಚಿಂತನೆಗಳು ಬದಲಾವಣೆ ತರುತ್ತವೆ ಎಂದು ನರೇಶ ಮುನಿ ಗುರು ಮಹಾರಾಜ ಹೇಳಿದರು.
ನಗರದ ಹೊರವಲಯದ ರಾಜೇಂದ್ರ ರವಿ ಕುಮಾರ್ ಬೋಹ್ರಾ ಆವರಣದಲ್ಲಿ ನರೇಶ ಮುನಿ ಗುರು ಮಹಾಜ್ ಮತ್ತು ಇತರರು ನಾಲ್ಕು ತಿಂಗಳ ಚಾತುರ್ಮಾಸ ಪ್ರವೇಶ ಅಂಗವಾಗಿ ರಾಯಚೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಜೆಸಿಐ ರಾಯಚೂರು, ವಾಕರ್ಸ್ ಗ್ರೂಪ್ ಮತ್ತು ರಾಜಸ್ಥಾನಿ ಸಂಘದ ವತಿಯಿಂದ ಹಮ್ಮಿಕೊಂಡ ವಿಹಾರಧಾಮ (ಗುರು ಮಹಾ ರಾಜರ ವಾಸ್ತವ್ಯದ ಸ್ಥಳ) ಉದ್ಘಾಟಿಸಿದರು, ನಂತರ ರಾಜಸ್ಥಾನಿ ಸಂಘದ ಸದಸ್ಯ ಕಮಲ್ ಕುಮಾರ ಅವರ ನಿವಾಸದಲ್ಲಿ ಆಶೀರ್ವದಿಸಿ ಮಾತನಾಡಿದರು,
ನಾವು ಮನುಷ್ಯರಿಗೆ ಧನ್ಯರು ಮತ್ತು ನಾವೆಲ್ಲರೂ ಒಳ್ಳೆಯವರು. ನಮ್ಮ ಒಳ್ಳೆಯ ಕಾರ್ಯಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಿ, ದೇವರು ನಮ್ಮನ್ನು ಆಶೀರ್ವದಿಸುತ್ತಾನೆ ಮತ್ತು ಹೆಚ್ಚಿನದನ್ನು ನೀಡುತ್ತಾನೆ ಎಂದರು.
ಸಕಾರಾತ್ಮಕ ಚಿಂತನೆ, ಉತ್ತಮ ಶಿಕ್ಷಣ, ಸರಿ ಯಾದ ಸಂದೇಶ ಮತ್ತು ಸರಿಯಾದ ಚಿಂತನೆಗಳು ಬದಲಾವಣೆ ತರುತ್ತವೆ, ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಬುದ್ಧಿಜೀವಿಗಳು ಸಹಕರಿ ಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಶಾಸ್ಲಿಭದ್ರ ಗುರುಮಹಾರಾಜ, ಗೌತಮ್ ಘಿಯಾ ಮತ್ತು ಎಸ್. ಕಮಲ್ ಕುಮಾರ್ ಇದ್ದರು.