ರಾಯಚೂರು.ಸಮುದಾಯದ ಸಾಮೂಹಿಕ ನಿರ್ವಹಣೆ, ಸಹಭಾಗಿತ್ವದಿಂದ ಮಾತ್ರ ಗಿಡಮರ ಗಳನ್ನು ಬೆಳೆಸಿ ಉಳಿಸಲು ಸಾಧ್ಯವಾಗಲಿದೆ ಎಂದು ವಾರ್ಡ್ ನಂ.2ರ ನಗರಸಭೆ ಹಿರಿಯ ಸದಸ್ಯ ಜಯಣ್ಣ ಹೇಳಿದರು.
ನಗರದ ಪವನ್ ಲೇಔಟ್‌ನಲ್ಲಿ ರಾಯಚೂರು ಹಸಿರು ಬಳಗ, ಅರಣ್ಯ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಸಸ್ಯಪಾಲನೆ ಮತ್ತು ನಾಮಕರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾ ಡಿದರು. ಪವನ್‌ಲೇಔಟ್‌ನ ಉದ್ಯಾನವದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನಾವುಗಳು ನೆಟ್ಟ ಗಿಡಗಳೊಂದಿಗೆ ಗುರುತಿಸಿಕೊಳ್ಳಬೇಕೆಂಬ ಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಸಂಘಟಿ ಸಲಾಗಿದೆ ಎಂದರು.
ಬಡಾವಣೆಯ ನಾಗರೀಕರ ಸಹಕಾರದಿಂದಾಗಿ ಉದ್ಯಾನವನ ಹಸಿರುಕರಣವಾಗಿದೆ. ವಾರ್ಡಿನ ಸಂಪೂರ್ಣ ಅಭಿವೃದ್ದಿ ಜೊತೆಗೆ ಹಸಿರೀಕರಣ ವಾಗಬೇಕೆಂಬ ಹಂಬಲ ನಮ್ಮದಾಗಿದೆ. ಬಡಾವಣೆಯ ನಾಗರೀಕರ ಸಹಕಾರ ಹೀಗೆ ಇರಲಿ ಎಂದರು.
ನಾನು ನಗರಸಭೆ ಉಪಾಧ್ಯಕ್ಷನಾಗಿದ್ದ ವೇಳೆ ಸಸಿಗಳನ್ನು ನೆಡಲು ಮುಂದಾದಾಗ ರಸ್ತೆ, ಚರಂ ಡಿ, ಸೌಲಭ್ಯ ಕಲ್ಪಿಸದೆ ಸಸಿ ನೆಡುತ್ತಿದ್ದಾರೆಂದು ಗೇಲಿ ಮಾಡಿ ಟೀಕೆ ಮಾಡಿದಾಗಲೂ ನಾನು ಅದನ್ನ ಪಾಸಿಟಿವ್ ಆಗಿ ಸ್ವೀಕರಿಸಿ ನನ್ನ ಕಾರ್ಯ ಮುಂದುವರೆಸಿದೆ ಎಂದರು. ವಾರ್ಡಿನಲ್ಲಿ ಸುಮಾರು 20 ಉದ್ಯಾನವನಗಳ ಹಸೀಕರಣಕ್ಕೆ ಮುಂದಾಗಿದ್ದೇನೆ ಎಂದರು.
ಸಸಿಗೆ ಸಾಲುಮರದ ತಿಮ್ಮಕ್ಕ ಎಂದು ಹೆಸರಿ ಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ರಾಜೇಶ ಮಾತನಾಡಿ, ಬಹಳಷ್ಟು ಕಡೆ ಸಸಿಗಳನ್ನು ನೆಡಲಾಗುತ್ತಿದೆ ಆದರೇ ನಂತರ ಸಸಿಗಳು ಬೆಳೆದಿವೆಯೋ ಇಲ್ಲವೋ ಎನ್ನುವುದನ್ನು ಗಮನಿಸುವುದೇ ಇಲ್ಲ. ಆದರೇ ಪವನ್ ಲೇಔಟ್‌ನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ನೆಟ್ಟ ಸಸಿಗಳು ಇಂದು ಮರವಾಗಿ ಬೆಳೆದು ನಿಂತಿವೆ. ಸಸಿ ನೆಡುವುದು ಮುಖ್ಯವಲ್ಲ. ಸಸಿ ಬೆಳೆದಾಗ ಸಂಭ್ರಮಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಎಂ.ಫೀರ್‌ಜಾದೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ, ವಾಸವಿ ಕ್ಲಬ್ ಸದಸ್ಯ ಕನ್ನಿಕಾ, ಫಾದರ್ ಅನೋಕ್, ನಿವೃತ್ತ ಶಿಕ್ಷಣಾಧಿಕಾರಿ ಹನುಮಂತಪ್ಪ ಗವಾಯಿ, ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ . ಸತ್ಯ ರಾಜ್ ಸೇರಿದಂತೆ ಪವನ್‌ಲೇಔಟ್ ಮತ್ತು ಸುತ್ತಮುತ್ತಲ ಬಡಾವಣೆಯ ನಾಗರೀಕರು ಭಾಗವಹಿಸಿದ್ದರು. ಮುಖ್ಯಗುರು ಬಸಪ್ಪ ಗದ್ದಿ ನಿರೂಪಿಸಿ ವಂದಿಸಿದರು.
ಪವನ್ ಲೇಔಟ್‌ನಲ್ಲಿ ಬೆಳೆದ 120 ಮರಗಳಿಗೆ ಪ್ರತಿಯೊಬ್ಬರು ಹೆಸರಿಡುವ ಫಲಕಗಳನ್ನು ಕಟ್ಟಿ ಮರಗಳೊಂದಿಗೆ ಸಂಭ್ರಮಿಸಿದರು.