ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದ ತನಿಖೆಗಾಗಿ ನಿಗಮದ ಅಧ್ಯಕ್ಷ ಶಾಸಕ ದದ್ದಲ್ ಬಸನಗೌಡರಿಗಾಗಿ ಜಾರಿ ನಿರ್ದೇಶನಾಲ ಯದ ಅಧಿಕಾರಿಗಳಿಗೂ ಎಸ್‌ಐಟಿಗೂ ಸಿಗದೇ ಇದೀಗ ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದಾರೆ.
ಅಧಿವೇಶನ ಇಂದಿನಿಂದ ಆರಂಭವಾಗಿ ಹತ್ತು ದಿನಗಳ ಕಾಲ ನಡೆಯಲಿದೆ,ಎಸ್‌ಐಟಿ ಹಾಗೂ ಇಡಿ ಬಂಧನದಿಂದ ಸೇಫ್ ಆಗಿದ್ದಾರೆ.
ಕಳೆದ ಮೂರು ದಿನಗಳಿಂದ ಬಸವನಗೌಡ ದದ್ದಲ್ ಹಿಂದೆ ಇಡಿ ಅಧಿಕಾರಿಗಳು ನಿವಾಸ ಹಾಗೂ ಕಚೇರಿಗಳಿಗೆ ದಾಳಿ ದಾಖಲೆ ಪಡೆದಿದ್ದಾರೆ. ಅವರನ್ನು ಪ್ರಶ್ನಿಸಿಸಲು ಹುಡುಕಾಟ ನಡೆಸಿದ್ದರು, ದದ್ದಲ್ ಅವರಿಗೂ ಬಂಧನ ಭೀತಿ ಶುರುವಾಗಿತ್ತು. ಇಡಿ ಅಧಿಕಾರಿಗಳು ಹುಡುಕಾ ಡುತ್ತಿದ್ದಂತೆ ದದ್ದಲ್ ನಾಪತ್ತೆಯಾಗಿದ್ದರು. ಆರೋಪದ ತೂಗಿಗತ್ತಿಯಿಂದ ಪಾರಾಗಲು ಕಣ್ಮರೆಯಾಗಿ ಇದೀಗ ಸದನಕ್ಕೆ ಆಗಮಿಸಿದ್ದಾರೆ.