Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ಜಿಲ್ಲೆಗೆ 1 ಕೋಟಿ 10 ಲಕ್ಷ ಮಾನವ ದಿನಗಳ ಗುರಿ; 71,51,484  ಮಾನವ ದಿನಗಳ ಸೃಜಿಸಿ ರಾಜ್ಯದಲ್ಲೇ ಪ್ರಥಮ, ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ರಾಯಚೂರು ಪ್ರಥಮ ಸ್ಥಾನ

ಜಿಲ್ಲೆಗೆ 1 ಕೋಟಿ 10 ಲಕ್ಷ ಮಾನವ ದಿನಗಳ ಗುರಿ; 71,51,484  ಮಾನವ ದಿನಗಳ ಸೃಜಿಸಿ ರಾಜ್ಯದಲ್ಲೇ ಪ್ರಥಮ, ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ರಾಯಚೂರು ಪ್ರಥಮ ಸ್ಥಾನ

ರಾಯಚೂರು. ಗ್ರಾಮೀಣ ಪ್ರದೇಶದ ಜನರ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಯಚೂರು ಜಿಲ್ಲಾ ಪಂಚಾಯತ್ ವತಿಯಿಂದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಮಾನವ ದಿನಗಳನ್ನು ಸೃಜನೆ ಮಾಡುವಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ರಾಯಚೂರು ಜಿಲ್ಲೆಗೆ ೧ ಕೋಟಿ ೧೦ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಪ್ರಸ್ತುತ ಏಪ್ರಿಲ್ ನಿಂದ ಜುಲೈವರೆಗೆ ೭೧,೫೧,೪೮೪ ಮಾನವ ದಿನಗಳ ಸೃಜಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಬೆಳಗಾವಿ ೫೪,೦೯,೬೪೩ ದ್ವಿತೀಯ ಸ್ಥಾನ, ಬಳ್ಳಾರಿ ೫೧,೯೨,೫೭೦ ತೃತೀಯ ಸ್ಥಾನ, ಕೊಪ್ಪಳ ೪೯,೮೨,೩೯೮ ನಾಲ್ಕನೇ ಸ್ಥಾನ, ವಿಜಯನಗರ ೪೨,೬೧,೦೭೬ ಐದನೇ ಸ್ಥಾನದಲ್ಲಿದೆ.
೨೦೨೪ರ ಏಪ್ರಿಲ್ ೧ರಿಂದ ಕೇಂದ್ರ ಸರ್ಕಾರ ನರೇಗಾ ಕೂಲಿ ಮೊತ್ತವನ್ನು ೩೧೬ರೂ. ಯಿಂದ ೩೪೯ರೂ.ಗೆ ಹೆಚ್ಚಳ ಮಾಡಿದೆ. ಈ ಬಗ್ಗೆ ರಾಯಚೂರು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಕೂಲಿಕಾರರಿಗೆ ಹೆಚ್ಚು ಮಾಹಿತಿ ನೀಡಿದ್ದರಿಂದ ಜನ ಗುಳೆ ಹೋಗುವುದನ್ನು ಬಿಟ್ಟು ನರೇಗಾದಡಿ ಇದ್ದೂರಲ್ಲೇ ಕೆಲಸ ಮಾಡಿಕೊಂಡು ನೆಮ್ಮದಿಯ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಜಿಲ್ಲೆಯ ೧೭೯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರರು ಕೆರೆ ಅಭಿವೃದ್ಧಿ, ಕೃಷಿ ಹೊಂಡ, ಬದು ನಿರ್ಮಾಣ ಮತ್ತು ನಾಲಾ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಶೇ.೬೨.೨೧ ರಾಯಚೂರು ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಒದಗಿಸಲಾಗಿದೆ.
ರೈತರಿಗಾಗಿ ವಿವಿಧ ಯೋಜನೆ: ರಾಯಚೂರು ಜಿಲ್ಲಾ ಪಂಚಾಯತಿಯಿAದ ಜಿಲ್ಲೆಯಾದ್ಯಂತ ೧೭೯ ಗ್ರಾ.ಪಂಗಳಲ್ಲಿ ಜಲಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಪ್ರಗತಿಯಲ್ಲಿವೆ. ಪ್ರಸ್ತಕ ನರೇಗಾದಡಿ ರೈತರ ಜಮೀನುಗಳಲ್ಲಿ ಕೈಗೆತ್ತಿಕೊಂಡಿರುವ ಅಂತರ್ಜಲವೃದ್ಧಿಗೆ ಈ ವರ್ಷ ಕ್ರಿಯಾ ಯೊಜನೆ ಪ್ರಕಾರ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ೫೦ ರೈತರ ಜಮೀನಿನಲ್ಲಿ ಬದು, ಕೃಷಿ ಹೊಂಡ, ತೆರೆದ ಬಾವಿ ನಿರ್ಮಾಣ ಕಾಮಗಾರಿ, ೫೦ ಸೋಕ್‌ಪಿಟ್ ನಿರ್ಮಾಣ, ಕಾಮಗಾರಿ ನಿರ್ವಹಿಸುವುದು, ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಹೂಳು ತೆಗೆಯುವುದು, ಕೆರೆ ಏರಿ ಮತ್ತು ಕೋಡಿ ದುರಸ್ತಿ, ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಮತ್ತು ಕೆರೆ ಅಂಚಿನಲ್ಲಿ ಅರಣ್ಯೀಕರಣ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವುದು, ರಸ್ತೆ ಬದಿ ನೆಡುತೋಪು, ಬ್ಲಾಕ್ ಪ್ಲಾಂಟೇಶನ್, ಕೃಷಿ ಅರಣ್ಯೀಕರಣ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಕಾಮಗಾರಿಗಳು, ಬೋರ್‌ವೆಲ್ ರಿಜಾರ್ಜ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
೪೦,೯೩೬ ಕಾಮಗಾರಿಗಳ ಅನುಷ್ಠಾನಕ್ಕೆ ಜಿ.ಪಂ ನಿಂದ ತಯಾರಿ; ರಾಯಚೂರು ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲೆಯಾದ್ಯಂತ ೧೭೯ ಗ್ರಾ.ಪಂಗಳಲ್ಲಿ ಜಲಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಗೇಬಿಯನ ಚೆಕ್ ಡ್ಯಾಂ-೧೪೧, ಬೋಲ್ಡರ್ ಚೆಕ್– ೧೮೦, ಚೆಕ್ ಡ್ಯಾಂ-೧೮೭, ಮಲ್ಟಿ ಆರ್ಚ್ ಚೆಕ್ ಡ್ಯಾಂ–೬, ಗಲ್ಲಿ ಪ್ಲಗ್-೪೬, ಲೂಸ ಸ್ಟೋನ ಚೆಕ್ ಡ್ಯಾಂ–೨, ಲೂಸ ಬೋಲ್ಡರ್ ಚೆಕ್ ಡ್ಯಾಂ– ೩೦, ಕೆರೆ ನಿರ್ಮಾಣ ಅಥವಾ ಹೂಳೆತ್ತುವುದು-೭೮೯, ಗೋಕಟ್ಟೆ ನಿರ್ಮಾಣ ಅಥವಾ ಪುನಶ್ಚೇತನ– ೯೭, ಕಲ್ಯಾಣಿ ನಿರ್ಮಾಣ ಅಥವಾ ಪುನಶ್ಚೇತನ -೨೬, ಕಾಲುವೆ ನಿರ್ಮಾಣ ಅಥವಾ ಹೂಳೆತ್ತುವುದು–೮೨೬, ನಾಲಾ ಹೂಳೆತ್ತುವುದು-೨೪೮೯, ಹಳ್ಳ ಹೂಳೆತ್ತುವುದು-೪೨೮, ಕೃಷಿಹೊಂಡ–೨೦೬೭, ಬದು ನಿರ್ಮಾಣ-೯೦೬೯, ತೆರೆದ ಬಾವಿ ನಿರ್ಮಾಣ–೧೦೮, ಬೋರ್ ವೆಲ್ ರೀಚಾರ್ಜ್ ಪಿಟ್-೨೯೬, ಸರ್ಕಾರಿ/ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ರಚನೆ-೩, ರಸ್ತೆ ಬದಿ ನೆಡುತೋಪು– ೩೪೮, ಕೃಷಿ ಅರಣ್ಯೀಕರಣ– ೫೨, ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವುದು–೧೨೬, ವೃಕ್ಷ ವನ/ಪವಿತ್ರ ವನ–೩, ಅರಣ್ಯ ಪ್ರದೇಶಗಳಲ್ಲಿ ಕಂದಕಗಳ ನಿರ್ಮಾಣ–೪೮, ದನಗಳ ಶೆಡ್ ಕಾಮಗಾರಿಗಳು -೪೭೩, ಕುರಿ/ಮೇಕೆ ಶೆಡ್ ನಿರ್ಮಾಣ–೩೪೬, ಕೋಳಿ ಸಾಕಣೆ ಶೆಡ್ ನಿರ್ಮಾಣ–೨೭, ಹಂದಿ ಸಾಕಣೆ ಶೆಡ್ ನಿರ್ಮಾಣ–೧೦, ಏರೆಹುಳು ತೊಟ್ಟಿ ನಿರ್ಮಾಣ–೮೬, ರೇಷ್ಮೆ ಕಾಮಗಾರಿಗಳು– ೧೫, ರೇಷ್ಮೆ ಕಾಮಗಾರಿಗಳ ಪ್ರದೇಶ ವಿಸ್ತರರ್ಣ– ೨೬, ವಸತಿ ನಿರ್ಮಾಣ– ೨೨೦೩, ಶಾಲಾ ಕಂಪೌAಡ್– ೨೩೨, ಶಾಲಾ ಶೌಚಾಲಯ– ೨೦೮, ಶಾಲಾ ಆಟದ ಮೈದಾನ– ೧೩೭, ಖೋಖೋ ಆಟದ ಮೈದಾನ– ೧೫, ಬಾಸ್ಕೆಟ ಬಾಲ ಆಟದ ಮೈದಾನ– ೫, ಕಬಡ್ಡಿ ಆಟದ ಮೈದಾನ– ೭, ವಾಲಿಬಾಲ ಆಟದ ಮೈದಾನ– ೧೧, ಮಳೆ ನೀರು ಕೊಯ್ಲು– ೩೩, ಪೌಷ್ಟಿಕ ತೋಟ– ೮೩, ಶಾಲಾ ಅಡುಗೆ ಕೋಣೆ ನಿರ್ಮಾಣ– ೫೨, ಭೋಜನಾಲಯ ನಿರ್ಮಾಣ– ೧, ಸೋಕ್ ಪಿಟ್ ನಿರ್ಮಾಣ– ೮೫೪೩, ಸಮುದಾಯ ಸೋಕ್ ಪಿಟ್ ನಿರ್ಮಾಣ– ೩೮, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಕಾಮಗಾರಿಗಳು- ೧೧, ಬೂದು ನೀರಿನ ನಿರ್ವಹಣೆ ಕಾಮಗಾರಿಗಳು– ೨೦೫, ಗೋದಾಮು ನಿರ್ಮಾಣ– ೧೯, ಸಂಜೀವಿನಿ ಶೆಡ್ ನಿರ್ಮಾಣ– ೨೦, ಅಂಗನವಾಡಿ ಕಟ್ಟಡಗಳು– ೨೭, ಹಳ್ಳಿ ಸಂತೆ– ೬, ಸಿ.ಸಿ.ರಸ್ತೆ ಕಾಮಗಾರಿಗಳು– ೯೦೭, ತೋಟಗಾರಿಕೆ ಬೆಳೆಗಳು– ೧೭೩೯, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತೀರ್ಣ– ೬೩೧, ಮೊರಮ ರಸ್ತೆ ಕಾಮಗಾರಿಗಳು–೨೯೧, ಮೆಟಲ ರಸ್ತೆ ಕಾಮಗಾರಿಗಳು– ೪೫೪, ಚರಂಡಿ ಕಾಮಗಾರಿಗಳು–೫೬೦, ಸಿ.ಡಿ ನಿರ್ಮಾಣ– ೭೪೩, ಸ್ಮಶಾನ– ೧೭೩, ಒಕ್ಕಣಿ ಕಣ– ೩, ದನಗಳ ಕುಡಿಯುವ ನೀರಿನ ತೊಟ್ಟಿ ನಿರ್ಮಾಣ–೪, ಬಯೋ ಗ್ಯಾಸ್– ೯, ಗೋಮಾಳ ಅಭಿವೃದ್ಧಿ– ೨೯, ಚೆಕ್ ಡ್ಯಾಂ ಹೂಳೆತ್ತುವುದು– ೧೬, ಉದ್ಯಾನವನ– ೨೬೨, ಗ್ರಾಮ ಪಂಚಾಯಿತಿ ಕಟ್ಟಡ– ೧೩, ಈರುಳ್ಳಿ ಶೆಡ್ಡು– ೪೨, ಸಿಲ್ವಿಪ್ಯಾಚರ್– ೭೨, ರೈತರ ಜಮೀನಿನಲ್ಲಿ ನೆಡುತೋಪು– ೪೨, ನ್ಯೂಟ್ರಿಷನ್ ಗಾರ್ಡನ್–೧೧ ಇತರೆ ಕಾಮಗಾರಿಗಳು ಸೇರಿದಂತೆ ಒಟ್ಟು ೪೦೯೩೬ ಕಾಮಗಾರಿಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್ ನಿಂದ ತಯಾರಿ ನಡೆಸಲಾಗಿದೆ.
ಕೂಲಿ ಸಾಮಾಗ್ರಿ ಪಾವತಿ: ಒಟ್ಟು ೩,೫೦,೭೯೧ ಸಕ್ರಿಯ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ. ೧೭೨.೮೨ ಲಕ್ಷಗಳು ಕೂಲಿ ವೆಚ್ಚವನ್ನು ಪಾವತಿ ಮಾಡಲಾಗಿದೆ. ೧೯.೭೩ ಲಕ್ಷಗಳು ಸಾಮಾಗ್ರಿ ವೆಚ್ಚವನ್ನು ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೫,೫೦,೫೭೬ ಸಕ್ರಿಯ ಕೂಲಿ ಕಾರ್ಮಿಕರನ್ನು ಒಳಗೊಂಡಿದ್ದು, ಅದರಲ್ಲಿ ೨,೮೨,೩೨೨ ಸಕ್ರಿಯ ಮಹಿಳೆಯರು ಹಾಗೂ ೯೬೬ ಅಂಗವಿಕಲರು ಮತ್ತು ೧೬೯ ಕುಟುಂಬಗಳು ೧೦೦ ದಿನ ಪೂರೈಸಿದ ಕುಟುಂಬಗಳ ಕಂಡುಬರುತ್ತೇವೆ. ೨೧,೩೮೪ ಹೊಸ ವಲಸೆ ಬಂದಿರುವ ಕುಟುಂಬಗಳಿಗೆ ಉದ್ಯೋಗ ಚೀಟಿಗಳನ್ನು ನೀಡಿ, ಉದ್ಯೋಗ ನೀಡಲಾಗಿದೆ.

Megha News