ರಾಯಚೂರು. ಮಳೆಗಾಲ ಆರಂಭವಾಗಿದ್ದ ರಿಂದ ಮಳೆ ಬರುವುದು ಸಾಮಾನ್ಯ ಆದರೆ ಇಲ್ಲಿ ಮಳೆಯ ಜೊತೆಗೆ ಬಿಳಿ ಬಣ್ಣ ಬೂದಿ ಆಕಾಶ ದಿಂದು ಬೀಳುತ್ತಿರುವುದು ನೀಜ, ಇದು ಮಳೆ ಎಂದು ಅಂದುಕೊಂಡಿರಬಹುದು ಆದರೆ ಇದು ವಿದ್ಯುತ್ ಉತ್ಪಾದನೆಯಿಂದ ಹೊರ ಹಾರು ಬೂದಿ, ಎಲ್ಲಡೆ ಮಳೆಯಂತೆ ಈ ಗ್ರಾಮದಲ್ಲಿ ಬೀಳುತ್ತಿದೆ.
ತಾಲೂಕಿನ ಶಕ್ತಿನಗರದಲ್ಲಿ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳಿಂದ ವಿದ್ಯುತ್ ಉತ್ಪಾ ದನೆಯಾಗುತ್ತಿದೆ, ವಿದ್ಯುತ್ ಉತ್ಪಾದನೆ ಯಿಂದ ಹೊರ ಬರುವ ಹಾರು ಬೂದಿಯನ್ನು ಒಂದೆಡೆ ಶೇಕರಣೆ ಮಾಡುತ್ತಿದೆ, ಗಾಳಿ ಮೂಲಕ ಈ ಹಾರು ಬೂದಿ ಎಲ್ಲಡೆ ಹರಡಿ ಜನರ ಆರೋಗ್ಯದ ಮೇಲೆ ಹರಡಿ ದುಷ್ಪರಿಣಾಮ ಬೀರುತ್ತಿದೆ.
ಇದಕ್ಕೆ ತಾಜಾ ಉದಾಹರಣೆಗೆ ಎಂಬಂತೆ ಶಕ್ತಿನಗರ, ಯದ್ಲಾಪೂರ ಸೇರಿದಂತೆ ಸುತ್ತಮು ತ್ತಲಿನ ಗ್ರಾಮಗಳಲ್ಲಿ ಹಾರೂ ಬೂದಿಯಿಂದಾಗಿ ಜನರು ರೋಸಿ ಹೋಗಿದ್ದಾರೆ. ಗಾಳಿಗೆ ಮಳೆಯಂತೆ ಎಲ್ಲೆಡೆ ಬೀಳುತ್ತಿದೆ, ಹಾರುಬೂದಿ ಮನೆಯಲ್ಲಿರು ತಿನ್ನೋ ಆಹಾರದ ಮೇಲೆ ಬೀರುತ್ತಿರುವುದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿಯೂ ಸಹ ಬೂದಿ ಬಿಳುತ್ತಿದ್ದು, ಒಡಾಡಿದಂತೆಲ್ಲ ಕಾಲಿಗೆ ಬೂದಿ ಮೆತ್ತಿಕೊಳ್ಳುತ್ತಿದೆ. ಈ ಬಗ್ಗೆ ನಿವಾಸಿಗಳು ಸಾಕಷ್ಟು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ.
ರಾಜ್ಯಕ್ಕೆ ಬೆಳಕು ನೀಡುವ ಸ್ಥಾವರದ ಪಕ್ಕದಲ್ಲಿ ವಾಸವಾಗಿರು ವವರ ಬದುಕು ನರಕವಾಗಿದೆ, ಆರೋಗ್ಯ ಸಮಸ್ಯೆ, ಧೂಳಿನಿಂದಾಗಿ ಜನರು ತತ್ತರಿಸಿದ್ದಾರೆ, ಒಂದು ಕಡೆ ವಿದ್ಯುತ್ ನೀಡುತ್ತೇವೆ ಎಂಬ ಹೆಮ್ಮೆ ಇದ್ದರೆ ಇನ್ನೊಂದು ಆರೋಗ್ಯ ಸಮಸ್ಯೆಯಿಂದ ನಾವೇಕಾದರೂ ಇಲ್ಲಿದ್ದೇವೆ ಎನ್ನುತ್ತಿದ್ದಾರೆ. ಇಲ್ಲಿ ವಾಸ ಮಾಡುವ ನಿವಾಸಿಗಳು.
ದೇವಸಗೂರು, ಶಕ್ತಿನಗರ, ಯದ್ಲಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಆರೋಗ್ಯ ಸಮಸ್ಯೆ ಇದೆ, ಹಲವು ಕಡೆ ಅಸ್ತಮಾ, ಕೆಲವು ಮಕ್ಕಳಲ್ಲಿ ಬೆಳವಣಿಗೆ ಇಲ್ಲದೆ ಇರೋದು, ಕ್ಯಾನ್ಸರ್ ನಂಥ ಕಾಯಿಲೆಗಳು ಕಾಡುತ್ತಿವೆ.
ಇದಕ್ಕೆಲ್ಲ ಕಾರಣ ಆರ್ ಟಿಪಿಎಸ್ ನಿಂದ ಹೊರ ಬರುವ ಹಾರು ಬೂದಿ ಹಾಗು ಬೂದಿ ಹೊಂಡದಿಂದ ಎಂದು ಜನರು ಆರೋಪಿಸುತ್ತಿದ್ದಾರೆ.