ರಾಯಚೂರು : ಜಿಲ್ಲೆಯ ರೈತರು ಅತಿಹೆಚ್ಚಿನ ಪ್ರಮಾಣದಲ್ಲಿ ಹತ್ತಿಯನ್ನು ಬೆಳೆಯುತ್ತಾರೆ ಆದರೆ ಕಡಿಮೆ ಪ್ರಮಾಣದಲ್ಲಿ ಯಶಸ್ಸನ್ನು ಹೊಂದುತ್ತಾರೆ ಇಲ್ಲಿನ ವಾತಾವರಣ ಕಡಿಮೆ ಪ್ರಮಾಣದ ಮಳೆ ಇವೆಲ್ಲವೂ ಕೂಡ ಬೆಳೆಯ ಪ್ರಮಾಣವನ್ನು ನಿರ್ಧರಿಸುತ್ತದೆ ಈಗಾಗಿ ಸಾಂದ್ರ ಪದ್ಧತಿಯನ್ನು ಬೆಳೆಯುವ ಮೂಲಕ ರೈತರು ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ಕೃಷಿ ವಿಜ್ಞಾನ ಕೇಂದ್ರ ರಾಯಚೂರಿನ ಹಿರಿಯ ವಿಜ್ಞಾನಿಗಳಾದ ಡಾ.ಹನುಮಂತಪ್ಪ ಶ್ರೀಹರಿಯವರು ತಿಳಿಸಿದರು.
ಅವರಿಂದು ತಾಲೂಕಿನ ಪೂರತಿಪ್ಲಿ ಗ್ರಾಮದಲ್ಲಿ ರೈತರಿಗೆ ಸಾಂದ್ರ ಪದ್ಧತಿಯ ಹತ್ತಿ ಬೆಳೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು ಕಳೆದ ವರ್ಷ ತೀವ್ರ ಮಳೆಯ ಕೊರತೆಯ ನಡುವೆಯೂ ಕುರ್ಡಿ ಗ್ರಾಮದ ರೈತರೊಬ್ಬರು ಮಳೆಯಾಶ್ರಿತ ಭೂಮಿಯಲ್ಲಿ ಸಾಂದ್ರ ಪದ್ಧತಿಯಲ್ಲಿ ಹತ್ತಿಯನ್ನು ಬೆಳೆದು 12 ಕ್ವಿಂಟಾಲ್ ಇಳುವರಿಯನ್ನು ಪಡೆಯುವ ಮೂಲಕ ಯಶಸ್ಸುನ್ನು ಹೊಂದಿದ್ದಾರೆ ಈಗಾಗಿ ಎಲ್ಲಾ ರೈತರು ಈ ಒಂದು ಪದ್ಧತಿಯಲ್ಲಿ ಹತ್ತಿ ಬೇಸಾಯವನ್ನು ಮಾಡುವ ಮೂಲಕ ಯಶಸ್ಸನ್ನು ಹೊಂದಬೇಕೆಂದು ತಿಳಿಸಿದರು.
ಈ ವೇಳೆ ಎ.ಐ.ಸಿ.ಆರ್.ಪಿ ಮುಖ್ಯಸ್ಥರಾದ ಡಾ.ಜಯಪ್ರಕಾಶ್ ಎಂ. ನಿಡಗುಂದಿಯವರು ಮಾತನಾಡಿ ಸಾಂದ್ರ ಬೇಸಾಯ ಮಾಡಲು ಅಗತ್ಯವಿರುವ ಹೈಬ್ರೀಡ್ ತಳಿಗಳು ಹಾಗೂ ಅಂತಹ ಬೀಜನಗಳನ್ನು ಸಾಮಾನ್ಯವಾಗಿ ಬಳಸಿದಲ್ಲಿ ಆಗುವಂತಹ ಅನಾಹುತಗಳ ಕುರಿತು ಹಾಗೆ ಯಾವ ಸಮಯದಲ್ಲಿ ರಸಗೊಬ್ಬರ ಯಾವ ರೀತಿಯಾಗಿ ಬೆಳೆಗಳಿಗೆ ಉಣಿಸಬೇ ಕೆಂದು ತಿಳಿಸಿದರು.
ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿಯಾದ ಶ್ರೀವಾಣಿಯವರು ಮಾತನಾಡಿ ಹತ್ತಿ ಬೆಳೆಯಲ್ಲಿ ರೈತರು ಮುಖ್ಯವಾಗಿ ಎದುರಿಸುತ್ತಿರುವ ಗುಲಾಬಿ ಕಾಯಿಕೊರಕ ಕೀಟ ಹತೋಟಿ ಮಾಡುವುದರ ಕುರಿತು ರೈತರಿಗೆ ತಿಳಿಹೇಳಿದರು. ರೈತರು ಹತ್ತಿ ಬಿಡುಸುವುದು ಮುಗಿದ ಕೂಡಲೇ ಅದನ್ನು ಶೆಡ್ಡಿಂಗ್ ಯಂತ್ರದ ಮೂಲಕ ಕಟ್ ಮಾಡಿ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡಬಹುದು ಅಲ್ಲದೇ ಅವುಗಳು ಮೊಟ್ಟೆ ಇಡಲಾರದೇ ಪತಂಗಿಗಳನ್ನು ಮೋಹಕ ಬಲೆ ಮುಖಾಂತರ ನಿಯಂತ್ರಿಸಿ ಬೇವಿನ ಎಣ್ಣೆ ಇನ್ನಿತರ ಸೂಕ್ತ ಔಷಧಿಗಳನ್ನು ಸಿಂಪಡಿಸುವ ಮೂಲಕ ಹೊಸ ಆವಿಷ್ಕಾರ ಕೀಟನಾಶಕ ಟ್ಯೂಬ್ ಗಳನ್ನು ಹೊಲದಲ್ಲಿ ಹಚ್ಚುವುದರಿಂದ ಈ ರೋಗವನ್ನು ಹತೋಟಿಯನ್ನು ಇಡಬಹುದು ಎಂದು ತಿಳಿಸಿದರು.
ಈ ವೇಳೆ ಈ ಭಾಗದಲ್ಲಿ ಸಾಂದ್ರ ಹತ್ತಿ ಬೇಸಾಯವನ್ನು ಅನುಷ್ಠಾನ ಮಾಡುತ್ತಿರುವ ಸೈಮಾ ಹತ್ತಿ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಪ್ರತಿನಿಧಿಯಾದ ಕೆ.ಮಧುಬಾಬು ಮಾತನಾಡುತ್ತ ಕಳೆದ ವರ್ಷ 112 ಎಕೆರೆಯಲ್ಲಿ ಈ ಪದ್ಧತಿಯನ್ನು ಅನುಷ್ಠಾನಕ್ಕೆ ತರಲಾಗಿತ್ತು, ಪ್ರಸ್ತಕ ವರ್ಷದಲ್ಲಿ 598 ಎಕೆರೆಯಲ್ಲಿ ಅನುಷ್ಠಾನ ಮಾಡಲಾಗಿದೆ, ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಉಚಿತವಾಗಿ ಸೂಕ್ತವಾದ ಬೀಜಗಳನ್ನು ವಿತರಿಸಲಾಗಿದ್ದು ಹಾಗೂ ಮೊಪೈಕ್ವಾಟ್ ಕ್ಲೋರೈಡ್, ಫೇರೋಮೆನ್ ಟ್ರಾಪಸ್೯ ಮತ್ತು ಮ್ಯಾಜಿಕ್ ಸ್ಟಿಕ್ಕರ್ (ಜಿಗಟ ಪಟ್ಟಿ) ಗಳನ್ನು ರೈತರಿಗೆ ಒಂದು ವಾರದ ಒಳಗೆ ವಿತರಿಸಲಾಗುವುದು ಇದನ್ನು ರೈತರು ಸದುಪಯೋಗ ಪಡಿಸಿಕೊಂಡು ಕೃಷಿಯಲ್ಲಿ ಯಶಸ್ಸನ್ನು ಹೊಂದಬೇಕೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ರೈತರು ತರಬೇತಿ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಡಾ. ಉಮೇಶ್ ಬಾಬು,ಡಾ. ಸಂಗೀತಾ, ಕೃಷಿ ವಿಜ್ಞಾನ ಕೇಂದ್ರ, ರಾಯಚೂರು , ಅಶೋಕ್ , ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.