ರಾಯಚೂರು. ಡೆಂಗ್ಯೂ ಜ್ವರ, ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಕಾರ್ಯಕ್ರಮ ಜು. 29-7-24 ರಿಂದ14-8-24 ರವರೆಗೆ ನಡೆಯವ ಅಭಿಯಾನದ ಕುರಿತು ತಾಲೂಕ ಮಟ್ಟದ ಟಾಸ್ಕ ಪೋರ್ಸ್ ಸಭೆ ನಡೆಸಲಾಯಿತು.
ತಾಲೂಕ ಆರೋಗ್ಯ ಅಧಿಕಾರಿಗಳು ಡಾ.ಪ್ರಜ್ವಲ್ ಕುಮಾರ ರವರು ಡೆಂಗ್ಯೂ ಜ್ಬರ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದರು . ಮಾನ್ಯ ಸಹಾಯಕ ಆಯುಕ್ತರು ಇತರೆ ಇಲಾಖೆ ಗಳ ಸಹಭಾಗಿತ್ವದಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಮಾಡಬಹುದು , ಸ್ಚಚ್ಚ ಪರಿಸರದಿಂದ ಘನತ್ಯಾಜ್ಯ ವಸ್ತು ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವದು ಎಲ್ಲರ ಜವಬ್ದಾರಿ ಎಂದು ತಿಳಿಸಿದರು.
ತಹಶಿಲ್ದಾರ್ ಸುರೇಶ ವರ್ಮ ಮಾತನಾಡಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಹಕರಿಸಿ ಅಭಿಯಾನ ಯಶಸ್ವಿ ಗೊಳಿಸಲು ತಿಳಿಸಿದರು.
ತಾಪಂ ಇಒ ಚಂದ್ರಶೇಖರ ಗ್ರಾಮ ಪಂಚಾಯತ್ ಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ , ಪ್ರತಿಯೊಬ್ಬರು ಪ್ರತಿ ಶುಕ್ರವಾರ ಡ್ರೈ ಡೇ ಲಾರ್ವ ಉತ್ಪತ್ತಿ ತಾಣ ಗಳ ನಾಶ ಮಾಡಿದಲ್ಲಿ ಡೆಂಗ್ಯೂ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರೋಜ.ಕೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಸಂಧ್ಯಾ ಎಮ್.ಟಿ.ಎಸ್. ಪಿ.ಡಿ.ಓ. ವಿ.ಎ. ಇತರೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.