ರಾಯಚೂರು. ನಾರಾಯಣ ಪೂರ ಜಲಾಶಯ ದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ಶ್ರೀ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನವು ಮುಳುಗಡೆಯಾಗಿದೆ.
ನಾರಾಯಣಪೂರು ಜಲಾಶಯದಿಂದ 1.80 ಲಕ್ಷ ಕ್ಯಸೆಕ್ ನೀರು ಹರಿಸಲಾಗಿದೆ. ಇದರಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾ ಗಿದೆ, ದೇವಸ್ಥಾನವು ನದಿ ತೀರದಲ್ಲಿದ್ದರಿಂದ ಜಲಾವೃತವಾಗಿದೆ.
ನದಿಯಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಳ ವಾದಲ್ಲಿ ದೇವಸ್ಥಾನ ಸಂಪೂರ್ಣ ಮುಳುಗುವ ಸಂಭವವಿದೆ. ರೈತರು ನದಿ ತೀರದಲ್ಲಿ ಹಾಕಿದ್ದ ಪಂಪ್ ಸೆಟ್ ಗಳನ್ನು ಸಾಗಿಸಿದ್ದಾರೆ. ಜನರು ತಮ್ಮ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.
ಇತ್ತ ಗುರ್ಜಾಪೂರು ಬ್ಯಾರೇಜ್‌ನ ಗೇಟ್ ಗಳನ್ನು ತೆಗೆಯಲಾಗಿದೆ.ನದಿ ಪಾತ್ರದ ಗ್ರಾಮಗಳ ಜನರು ಜನರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.
Megha News > Local News > ಕೃಷ್ಣಾ ನದಿಗೆ ನೀರು, ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತ
ಕೃಷ್ಣಾ ನದಿಗೆ ನೀರು, ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತ
Tayappa - Raichur22/07/2024
posted on
Leave a reply