Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಪ್ರೇಯಸಿಯೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹೆಡ್ ಕಾನ್ಸ್‌ಟೇಬಲ್

ಪ್ರೇಯಸಿಯೊಂದಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಹೆಡ್ ಕಾನ್ಸ್‌ಟೇಬಲ್

ರಾಯಚೂರು. ಪ್ರೇಯಸಿಯೊಂದಿಗೆ ಹೆಡ್ ಕಾನ್ಸ್‌ಟೇಬಲ್ ಬೆಡ್ ಮೇಲೆ ಇದ್ದಾಗಲೇ ಪತ್ನಿ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಸಿರವಾರ ಪಟ್ಟಣದಲ್ಲಿ ನಡೆದಿದೆ.

ಸಿರವಾರ ಠಾಣೆ ಹೆಡ್‌ ಕಾನ್‌ಸ್ಟೇಬಲ್ ಆಗಿರುವ ರಾಜ್ ಮಹಮ್ಮದ್ ಪ್ರೇಯಸಿ ಸರಳ ಮನೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಪತಿಯ ಮೇಲೆ ಅನುಮಾನ ವಿದ್ದು, ಮಾಹಿತಿ ಪಡೆದು ಮನೆಗೆ ನುಗ್ಗಿದ್ದಾಳೆ ಈ ವೇಳೆ ಪತಿ ಜೊತೆಗೆ ಪ್ರೇಯಸಿ ಇದ್ದು ಮನೆ ಬಾಗಿಲು ಮುಚ್ಚಿ ಲಾಕ್ ಮಾಡಿ ನಂತರ ಎಸ್‌ಪಿಗೆ ಕರೆ ಮಾಡಿ ದೂರು ನೀಡಿದ್ದಾರೆ‌. ಎಸ್‌ಪಿ ಸೂಚನೆ ಮೇರೆಗೆ ಸಿರವಾರ ಠಾಣೆ ಪಿಎಸ್‌ಐ ಗುರುಚಂದ್ರ ಯಾದವ್ ವಶಕ್ಕೆ ಪಡೆದು ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಲವ್ವಿಡವ್ವಿ ನಡೆಸಿದ್ದ ಪೊಲೀಸ್ ರಾಜ್ ಮಹಮ್ಮದ್ ಈ ಹಿಂದೆ ಕವಿತಾಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದಾಗ ಆಸ್ಪತ್ರೆ ಸ್ಟಾಫ್ ನರ್ಸ್ ಆಗಿರುವ ಸರಳ ಎಂಬಾಕೆಯ ಪರಿಚಯವಾಗಿದೆ. ಪೊಲೀ ಸ್ ಠಾಣೆ, ಆಸ್ಪತ್ರೆ ಎರಡೂ ಎದುರು ಬದರಾಗಿದ್ದರಿಂದ ದಿನನಿತ್ಯ ಮಾತುಕತೆ ಬೆಳೆದು ಪ್ರೀತಿಗೆ ತಿರುವಿದೆ. ಒಟ್ಟಿಗೆ ಕಾಲಕಳೆಯೋವರೆಗೆ ಸಂಬಂಧ ಬೆಳೆದಿದೆ.
ದೇವದುರ್ಗ ಪೊಲೀಸ್ ಠಾಣೆಯ ಪಿಸಿ ಆಗಿರುವ ಪತ್ನಿ ಪ್ಯಾರಿ ಬೇಗಂಗೆ ಹಿಂದಿನಿಂದಲೂ ಗಂಡನ ಹೆಣ್ಣಿನ ಹಿಂದೆ ಬಿದ್ದಿರುವ ಅನುಮಾನ ಇತ್ತು. ಆದರೆ ರೆಡ್‌ ಆಗಿ ಸಿಕ್ಕಿಬಿದ್ದಿರಲಿಲ್ಲ. ಆದರೆ ಗಂಡನ ಲವ್ವಿಲವ್ವಿ ಹೆಚ್ಚಾದಾಗ ಈ ಬಗ್ಗೆ ಎಸ್‌ಪಿ ಗಮನಕ್ಕೂ ತಂದಿದ್ದರು.
ಆದರೂ ಮುಂದುವರಿಸಿದ್ದ ಪತಿಯ ಬಗ್ಗೆ ಮಾಹಿತಿ ತಿಳಿಸಿಕೊಂಡದ್ದರು, ಇದೀಗ ಪತ್ನಿಗೆ ಸಿಕ್ಕಿ ಬಿದ್ದಿದ್ದಾನೆ.
ಈ ಕುರಿತು ಸಿರವಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Megha News