Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಮಠಗಳು ಮನುಷ್ಯನ ನೆಮ್ಮದಿ ಕೇಂದ್ರ – ಬಸವರಾಜ್‌ ಪಾಟೀಲ್ ಅನ್ವರಿ

ಮಠಗಳು ಮನುಷ್ಯನ ನೆಮ್ಮದಿ ಕೇಂದ್ರ – ಬಸವರಾಜ್‌ ಪಾಟೀಲ್ ಅನ್ವರಿ

ರಾಯಚೂರು : ಮಠಗಳು , ದೇವಸ್ಥಾನಗಳು ಮಾನಸಿಕ ನೆಮ್ಮದಿ ಮತ್ತು ಸಮಸ್ಯೆಗಳ ಪರಿಹಾರ ಕೇಂದ್ರಗಳಾಗಿವೆ ಎಂದು ಕೇಂದ್ರ ಮಾಜಿ ಸಚಿವರಾದ ಬಸವರಾಜ್ ಪಾಟೀಲ್ ಅನ್ವರಿಯವರು ತಿಳಿಸಿದರು.

ನಗರದ ಕಿಲ್ಲೇಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಶತಮಾನೋತ್ಸವ ನಿಮಿತ್ಯ ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರಿಯಂತರವಾಗಿ ಸಾಗಿ ಬರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಹಾಗೂ ಪ್ರಣವ ಪಂಚಾಕ್ಷರಿ ಮಹಾಮಂತ್ರದ ನಿತ್ಯ ಪ್ರಾರ್ಥನಾ ಯಜ್ಞದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದವರು ಪರಿಪೂರ್ಣ ಭಕ್ತಿಯಿಂದ ಭಗವಂತನನ್ನು ಪೂಜಿಸಿದರೆ ಫಲ ಪಾಪ್ರಿಯಾ ಗುತ್ತದೆ. ನಾನು ಕೇಂದ್ರ ಸಚಿವನಾಗಿ ಹಾಗೂ ಇನ್ನಿತರ ಪ್ರಮುಖ ಹುದ್ದೆಗಳನ್ನು ಪಡೆಯುವ ನಿಟ್ಟಿನಲ್ಲಿ ಅದಕ್ಕೆ ಮಠಾಧೀಶರ ಆರ್ಶೀವಾದವೇ ಕಾರಣವಾಗಿದೆ ಎಂದರು.
ಕಾರ್ಯಕ್ರಮವನ್ನು ಈ ಮಠದ ಮಕ್ಕಳ ಮಂತ್ರ ಘೋಷದಿಂದ ಪ್ರಾರಂಭಿಸಿಲಾಯಿತು. ಅಲ್ಲದೇ ಇಂಡಿಯನ್ ಡ್ಯಾನ್ಸ್ ಅಕಾಡೆಮಿ ತಂಡದಿಂದ ಭರತನಾಟ್ಯವನ್ನು ಪ್ರದರ್ಶಿಸಲಾಯಿತು. ನಂತರ ಬಲೂನ್ ಗಳನ್ನು ಹಾರಿಬಿಡುವ ಮೂಲಕ ನಂತರ ಜ್ಯೋತಿಬೆಳೆಗಿಸುವ ಮೂಲಕ ಉದ್ಘಾ ಟಿಸಲಾಯಿತು‌.
ಈ ವೇಳೆ ಮಾತನಾಡಿದ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಪಾಟೀಲ್ ಮಿರ್ಜಾಪುರವರು ಮಾತನಾಡಿ ಸಂಸ್ಕೃತಿಯನ್ನು ಉಳಿಸುವಂತಹ ಕಾರ್ಯ ಇಂದು ಮಠ – ಮಾನ್ಯಗಳಿಂದ ನಡೆಯುತ್ತಿದೆ. ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವಂತಹ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಲಿ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶ್ರೀಮಠದ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ ಶ್ರೀ ಮಠದ ಶ್ರಾವಣ ಸಂಭ್ರಮಕ್ಕೀಗ 100 ವರ್ಷಗಳು ಸಂದದ್ದು , ಹಿರಿಯ ಶ್ರೀಗಳ ದೈವದ ಆರ್ಶೀವಾದದಿಂದ ಶ್ರವಣ – ಶ್ರಾವಣ ನಡೆಯುತ್ತಿದ್ದು , ಶುಭಸೂಚಕವೆಂಬಂತೆ ಇಂದು ಮಳೆಯ ಆರಂಭವಾಗಿದೆ ರೈತರು ಸುಖಕರವಗಿದ್ದರೆ ದೇಶ ಸಮೃದ್ಧವಾಗಿರಲಿದೆ ಈಗಾಗಿ ವರಣು ದೇವನ ಕೃಪೆ ನಿರಂತರವಾಗಿರಲಿ ಅಲ್ಲದೇ ಆಧ್ಯಾತ್ಮಿಕ ಪ್ರವಚನ ಸೇರಿದಂತೆ ಶ್ರೀಮಠದಲ್ಲಿ ಶ್ರಾವಣ ಮಾಸದಾದ್ಯಂತ ಹಲವು ಕಾರ್ಯಕ್ರಮಗಳು ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕೆಂದು ಕೋರಿದರು‌.
ಈ ವೇಳೆ ಆಧ್ಯಾತ್ಮಿಕ ಪ್ರವಚನಕಾರರಾದ ಶ್ರೀ ನಿಜಾನಂದ ಸ್ವಾಮಿಗಳು ಮಾತನಾಡಿ ನಮ್ಮ ಭಾಗದಲ್ಲಿ ಬಸವೇಶ್ವರ ಕಾಯಕ ಮತ್ತು ದಾಸೋಹ ಪರಿಕಲ್ಪನೆ ಶಾಶ್ವತವಾಗಿ ಜನರಲ್ಲಿ ಮೂಡಿದ್ದು , ಮಠದ ಮೇಲೆ ಇಷ್ಟೊಂದು ಅಭಿಮಾನ ಹೊಂದಿರುವುದು ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ , ಪೋಷಕರು ಇಂದು ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವಂತಹ ನಿಟ್ಟಿನಲ್ಲಿ ಮುಂದುವರೆಯಲಿ ಎಂದು ನೆರದಿದ್ದ ಭಕ್ತರಿಗೆ ಓಂಕಾರ ಮಂತ್ರವನ್ನು ಪಠನವನ್ನು ಮಾಡಿಸಿದರು.
ಈ ಸಂದರ್ಭದಲ್ಲಿ ಚೇಗುಂಟ ಶ್ರೀಮಠ ಡಾ.ಕ್ಷೀರಲಿಂಗೇಶ್ವರ ಶರಣರು , ವೀರಶೈವ ಸಮಾಜದ ಅಧ್ಯಕ್ಷರಾದ ಶರಣಭೂಪಾಲರೆಡ್ಡಿ , ನಗರಸಭೆ ಸದಸ್ಯರಾದ ದರೂರು ಬಸವನಗೌಡ , ಸಿದ್ಧನಗೌಡ ಸಾನಬಾಳ್ ,ಅಶೋಕ್ ಪಾಟೀಲ್ ಅತ್ತನೂರು , ಚನ್ನಬಸವ , ಡಾ.ನಿಜಗುಣ ಶಿವಯೋಗಪ್ಪ ಜವಳಿ , ಶಿವಾನಂದ ಚುಕ್ಕಿ , ವಿರುಪನಗೌಡ ಬಂಡಿ , ಕೇಶವರೆಡ್ಡಿ ಸೇರಿದಂತೆ ಪ್ರಮುಖ ಮುಖಂಡರುಗಳು ನೂರಾರು ಭಕ್ತರು ಉಪಸ್ಥಿತರಿದ್ದರು.

Megha News