ರಾಯಚೂರು. ನಗರಸಭೆಯ ಗುತ್ತಿಗೆ ನೌಕರರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಮಂಗಳವಾರ ಪೇಟೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿರುವ ಗುತ್ತಿಗೆ ನೌಕರ ಅಫ್ಸರ್ ಅಲಿ ಎಂದು ತಿಳಿದು ಬಂದಿದೆ.
ಅಫ್ಸರ್ ಅಲಿ ನಗರಸಭೆಯ ವಿದ್ಯುತ್ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕಳೆದ 7 ತಿಂಗಳಿಂದ ವೇತನ ಪಾವತಿಯಾಗದೇ ಇರುವುದರಿಂದ ಮಾನಸಿಕವಾಗಿ ನೊಂದಿದ್ದ
ಇಂದು ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊರ ಗುತ್ತಿಗೆಯಾಗಿ ನಗರಸಭೆಯ ವಿದ್ಯುತ್ ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ 7 ತಿಂಗಳಿನಿಂದ ಕೆಲಸ ಮಾಡಿದ ವೇತನ ಪಾವತಿಗಾಗಿ ಸಾಕಷ್ಟು ಬಾರಿ ನಗರಸಭೆ ಪೌರಾಯುಕ್ತರನ್ನು ಬೇಟಿ ಮಾಡಿ ಕೇಳಲಾಗಿದೆ, ಇಂದು ನಾಳೆ ಎಂದು ಬಾಕಿ ವೇತನ ಪಾವತಿ ಮಾಡಿಲ್ಲ, ಮನೆಯಲ್ಲಿ ಪರಸ್ಥಿತಿ ಕ್ಲಿಷ್ಟರವಾಗಿದ್ದು ಮನೆಗೆ ದಿನ ಬಳಕೆ ವಸ್ತುಗಳು ಖರೀದಿಗೆ ಹಣವಿಲ್ಲ, ಕಳೆದ ರಾತ್ರಿಯೂ ಈ ವಿಚಾರವಾಗಿ ನಗರಸಭೆ ಪೌರಾಯುಕ್ತರಿಗೆ ಬಾಕಿ ವೇತನ ನೀಡಿ ಕುಟುಂಬ ನಿರ್ವಹಣೆಯಲ್ಲಿ ತೊಂದರೆಯಾಗಿದೆ ಎಂದು ಅಂಗಲಾಚಿದೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಮಾನಸಿಕವಾಗಿ ನೊಂದಿದ್ದೇನೆ,ವೇತನ ಪಾವತಿಯಾಗದೇ ಹಿನ್ನಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಗುತ್ತಿಗೆ ನೌಕರ ಅಫ್ಸರ್ ಅಲಿ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಈ ಕುರಿತು ಸದರ್ ಬಜಾರ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.