Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local News

ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ ಅನುಷ್ಠಾನ ಮಾಡಲು ತಜ್ಞರ ತಂಡ ಭೇಟಿ

ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ ಅನುಷ್ಠಾನ ಮಾಡಲು ತಜ್ಞರ ತಂಡ ಭೇಟಿ

ರಾಯಚೂರು:ರಾಜ್ಯದ ಅತೀ ಬಡವರ ಸಬಲೀಕರಣಕ್ಕಾಗಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಹವಮಾನ ಬದಲಾವಣೆ ಪೀಡಿತ ಸಮುದಾಯಗಳ ಬಗ್ಗೆ ಅಧ್ಯಯನ ಮಾಡಲು ಬಿಆರ್‌ಎಸಿ ಹಾಗೂ ಕೆಐಎಲ್‌ಪಿ ತಂಡದ ತಜ್ಞರು ಇಂದು ಸಿರವಾರ ತಾಲೂಕಿಗೆ ಭೇಟಿ ನೀಡಿದ್ದರು.

ನೆದರಲ್ಯಾಂಡ್‌ ದೇಶದಿಂದ ಆಗಮಿಸಿದ ಬಿಆರ್‌ಎಸಿ ಅಂತರಾಷ್ಟ್ರೀಯ ತಾಂತ್ರಿಕ ಸಲಹೆಗಾರ, ಕಾರ್ಯಕ್ರಮ ವಿನ್ಯಾಸ ಮತ್ತು ಪ್ರಭಾವದ ಬೌಡೆವಿಜನ್ ವೀಜರ್ಮಾರ್ಸ್ ರವರು ಮಾತನಾಡಿ, ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ (ಕೆಐಎಲ್‌ಪಿ) ವನ್ನು ಅನುಷ್ಠಾನ ಮಾಡಲು ರಾಜ್ಯದಲ್ಲಿ 10 ಜಿಲ್ಲೆಗಳು ಆಯ್ಕೆಯಾಗಿರುವ ಪೈಕಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಆಯ್ಕೆಯಾಗಿದ್ದು, ಇದರಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಹತ್ವಕಾಂಕ್ಷೆ ತಾಲೂಕಗಳಾದ ಮಸ್ಕಿ, ಸಿರವಾರ ತಾಲೂಕಿನಲ್ಲಿ ಅತೀ ಕಡುಬಡತವುಳ್ಳವರನ್ನು ಗುರುತಿಸಿ ಅವರು ಜೀವನೋಪಾಯ ಚಟುವಟಿಕೆಗಳನ್ನು ನಡೆಸಲು ಬೇಕಾಗುವ ಅವಶ್ಯಕ ತರಬೇತಿ ಮತ್ತು ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.
ತೀವ್ರ ಬಡತನದಿಂದ ಹೊರಬರಲು ಅವರಿಗೆ ಸಹಾಯ ಮಾಡಿ ನಂತರ ಸುಸ್ಥಿರ ಜೀವನೋಪಾಯಕ್ಕೆ ಬೇಕಾಗುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಹವಮಾನ ಬದಲಾವಣೆಯಿಂದ ಜನರ ಜೀವನೋಪಾಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುವುದನ್ನು ತಡೆಯುವ ನಿಟ್ಟಿನಲ್ಲಿ ಕೆಐಎಲ್‌ಪಿ ಕಾರ್ಯಕ್ರಮ ಅನುಷ್ಠಾನ ಮಾಡಿ ಅವರ ನೆರವಿಗೆ ದಾವಿಸಲಾಗುತ್ತದೆ. ಹವಮಾನ ಬದಲಾವಣೆಯು ಜಾಗತೀಕವಾಗಿ ಪ್ರಮುಖ ಸಮಸ್ಯೆಯಾಗಿದ್ದು ಇದರಿಂದ ಹೊರಬರಲು ಏನು ಮಾಡಬೇಕಾಗಿದ ಎನ್ನುವದರ ಬಗ್ಗೆ ವಿಸ್ತೃತ ವರದಿಯನ್ನು ಸಿದ್ದಪಡಿಸಬೇಕಾಗಿದೆ ಎಂದರು.
ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಚರ್ಚೆ: ಬರಗಾಲ ಸಂದರ್ಭದಲ್ಲಿ ನೀರಿನ್ನು ಯಾವ ರೀತಿಯಲ್ಲಿ ಸರಿದೂಗಿಸಲಾಗುತ್ತದೆ. ನಿಮ್ಮ ಜೀವನವನ್ನು ಯಾವ ರೀತಿಯಲ್ಲಿ ರೂಪಿಸಕೊಳ್ಳಲಾಗುತ್ತದೆ. ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋದಾಗ ಅಲ್ಲಿ ಕೊಡುವ ಸಂಬಳ, ವಾಸ್ತವ್ಯ ಮಾಡುವ ವೇಳೆ ನೀವು ಎದುರಿಸುವ ಸಮಸ್ಯೆಗಳನ್ನು ಅರಿತಿಕೊಂಡರು. ವಲಸೆ ಹೋಗುವದನ್ನು ತಡೆದು ಸ್ಥಳದಲ್ಲಿಯೇ ಕೆಲಸ ನೀಡಲು ಏನು ಕ್ರಮ ಕೈಗೊಳ್ಳಬೇಕು ಮತ್ತು ನಿಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವದರ ಬಗ್ಗೆ ಚರ್ಚೆ ಮಾಡಲಾಯಿತು.
ಸಸ್ಯಕ್ಷೇತ್ರಕ್ಕೆ ಭೇಟಿ:ಕವಿತಾಳದಲ್ಲಿರುವ ಕವಿತಾ ಮಿಶ್ರ ಸಸ್ಯಕ್ಷೇತ್ರಕ್ಕೆ ಭೇಟಿ ನೀಡಿ, ಶ್ರೀಗಂಧದ ಬೆಳೆ ಮತ್ತು ಇತರೆ ಬೆಳೆಗಳ ಬಗ್ಗೆ ಮಾಹಿತಿ ಪಡೆದು ರೈತರ ಅದಾಯ ದ್ವಿಗುಣಗೊಳಿಸುವುದರ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶೀಧರ್‌ ಸ್ವಾಮಿ, ಬಿಆರ್‌ಎಸಿ ತಂಡದ ಪರಿಣಿತರಾದ ದ್ರಿಶ್ಯ, ಫೌಂಡೇಶನ್‌ ಫಾರ್‌ ಇಕಾಲಿಜಿಕಲ್‌ ಸೇಕ್ಯೂರಿಟ್ರಿಯ ವ್ಯವಸ್ಥಾಪಕ ಲೋಕೇಶ, ಎಫ್‌ಇಎಸ್‌ ನ ಶಂಕರಗೌಡ, ಖಾದರ್‌ ಬಾಷಾ, ವಸತಿ ನೋಡಲ್‌ ಅಧಿಕಾರಿ ಗೋಪಾಲ, ಜಿ.ಪಂ ಎನ್ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀನಾಥ, ತಾಲೂಕ ಪಂಚಾಯತ ವಲಯ ಮೇಲ್ವಿಚಾರಕ ಉಮೇಶ, ಐಇಸಿ ಸಂಯೋಜಕ ರಾಜೇಂದ್ರ, ಒಕ್ಕೂಟದ ಸಹಾಯಕ ಶ್ರೀಧರ್‌ ಮತ್ತು ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಪಶುಸಖಿ, ಕೃಷಿಸಖಿ, ಒಕ್ಕೂಟದ ಪದಾಧಿಕಾರಿಗಳು, ಗ್ರಾಮಸ್ಥರು, ರೈತರು ಭಾಗವಹಿಸಿದ್ದರು.

Megha News