ಮಾನವಿ. ತುಂಗಭದ್ರ ಎಡದಂಡೆ ಕಾಲುವೆಯಮೇಲ್ಬಾಗದ ಮಸ್ಕಿಯ ಮೈಲ್ 69 ಕ್ಕೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸ ರಾಜು ಹಾಗೂ ಶಾಸಕರಾದ ಹಂಪಯ್ಯ ನಾಯಕ ಅವರು ನೀರಾವರಿ ಅಧಿಕಾರಿಗಳೊಂದಿಗೆ ನೀರಿನ ಪ್ರಮಾಣವನ್ನು ವೀಕ್ಷಿಸಿದರು.
ಇನ್ನು ಎರಡು ದಿನಗಳೊಳಗಾಗಿ ಕೆಳ ಭಾಗಕ್ಕೆ ನೀರು ತಲುಪಿಸಲು ಹಾಗೂ ಹಗಲು-ರಾತ್ರಿ ನೀರಿನ ಪ್ರಮಾಣ ವ್ಯತ್ಯಾಸವಾಗದಂತೆ ವಿವಿಧ ಇಲಾಖೆಗಳ ಸಹಕಾರ ಪಡೆದು ಗೇಜ್ ಪ್ರಮಾಣ ಕಾಯ್ದಿರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿದರು.
ಬೆಳೆದು ನಿಂತ ಬೆಳೆಗಳು ಬಾಡುತ್ತಿವೆ ಎಂದು ರೈತರು ಸಮರ್ಪಕ ನೀರು ಸರಬರಾಜಿಗಾಗಿ ಮನವಿ ಮಾಡುತ್ತಿದ್ದಾರೆ. ಶೀಘ್ರ ನೀರಿನಪ್ರಮಾಣ ಕಾಯ್ದಿರಿಸಿ ಕೆಳಭಾಗದ ರೈತರಿಗೆ ನೀರು ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ನೀರಾವರಿ ಇಲಾಖೆಯ ಎಸ್.ಇ ಶಿವಶಂಕರ್ ಕೆಹೆಚ್ ಬಿ, ಕಾರ್ಯನಿರ್ವಾಕ ಅಭಿಯಂತರರಾದ ಸತ್ಯನಾರಾಯಣ ಶಟ್ಟಿ,
ಹಿರೇಕೊಟ್ನೆಕಲ್ ಎಇಇ ವಿಜಯ ಲಕ್ಷ್ಮೀ ಪಾಟೀಲ್, ದಾವುದ್ ಸಚಿವರಿಗೆ ನೀರಿನ ಪ್ರಮಾಣದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಯ್ಯ ನಾಯಕ, ಪಟ್ಟಣ ಪಂಚಾಯ್ತಿ ಅದ್ಯಕ್ಷರಾದ ವೈ ಭೂಪನಗೌಡ, ವೆಂಕಟರಡ್ಡಿ ಹಾಲಾಪೂರು, ಬ್ರಿಜ್ಜೇಶ ಪಾಟೀಲ್, ಶಿವಕುಮಾರ ಅರಕೇರಿ, ಚುಕ್ಕಿ ಉಮಾಪತಿ, ರಮೇಶ ದರ್ಶನಕರ್, ಸೂರಿ ದುರಗಣ್ಣ, ಹಸೇನ್ ಅಲಿ, ಶ್ರೀದರ್ ಸ್ವಾಮಿ, ನಾಗರಾಜ್ ಚಿನ್ನನ್, ರಂಗನಾಥ ನಾಯಕ, ನೀರಾವರಿ ಇಲಾಖೆಯ ಅಧಿಕಾರಿಗಳು, ಸಿರವಾರ, ಮಾನ್ವಿ ತಹಶೀಲ್ದಾರರು ಸೇರಿ ಅನೇಕರಿದ್ದರು.