ರಾಯಚೂರು.ಆಟೋಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಹೋಗುತ್ತಿದ್ದು ಸಂಚಾರಿ ಪೋಲಿಸ್ ಠಾಣೆ ಪಿಎಸ್‌ಐ ವೆಂಕಟೇಶ ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿ ವಿನಾಯಕ ಅವರು ಆಟೋಗಳನ್ನು ತಡೆದು ಆಟೋಗಳ ದಾಖಲಾತಿಗಳನ್ನು ಪರಿಶೀಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗ ಳನ್ನು ಕರೆದುಕೊಂಡು ಹೋಗದಂತೆ ಜಾಗೃತಿ ಮೂಡಿಸಿದರು.
ನಗರದ ಸ್ಟೇಷನ್ ರಸ್ತೆಯಲ್ಲಿ ವಿವಿಧ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗಳನ್ನು ಪಿಎಸ್‌ಐ ವೆಂಕಟೇಶ ಹಾಗೂ ಆರ್‌ಟಿಒ ಇಲಾಖೆ ಅಧಿಕಾರಿ ವಿನಾಯಕ ಅವರು ಆಟೋಗಳ ಆರ್.ಸಿ ಮತ್ತು ಇನ್ಸೂರೆನ್ಸ್ ಸೇರಿ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ನಂತರ ಆಟೋಗಳ ಚಾಲಕರಿಗೆ ಸೂಚನೆ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಆಟೋದಲ್ಲಿ ಕರೆದುಕೊಂಡು ಹೋಗುವಂತಿಲ್ಲ, ಜೊತೆಗೆ ಸಾರಿಗೆ ನಿಯಮ ಪಾಲನೆ ಮಾಡಬೇಕು, ವೇಗವಾಗಿ ಹೋಗುವುದು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಎಸ್ಐ ಬಸವರಾಜ, ಮತ್ತು ಟ್ರಾಫಿಕ್ ಪೋಲಿಸರು ಇದ್ದರು.