ರಾಯಚೂರು : ಇತ್ತೀಚೆಗೆ ಪೂರ್ಣಿಮಾ ಪದವಿ ಪೂರ್ವ ಕಾಲೇಜು ವತಿಯಿಂದ ನಗರದ ಎಸ್.ಆರ್.ಪಿ.ಎಸ್ ಹಾಗೂ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 3 ದಿನಗಳ ಕ್ರೀಡಾಕೂಟದಲ್ಲಿ ನಗರದ ಪ್ರತಿಷ್ಠಿತ ಸಂಸ್ಥೆಯಾದ ಎಸ್.ಆರ್.ಪಿ.ಎಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಸಂಸ್ಥೆಗೆ ಹಾಗೂ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ಗುಂಪು ಆಟಗಳಾದ ಥ್ರೋಬಾಲ್ ಬಾಲಕರ ಹಾಗೂ ಬಾಲಕಿಯರ ತಂಡ , ಕಬ್ಬಡ್ಡಿ ,ಹ್ಯಾಂಡಬಾಲ್, ಟೇಬಲ್ ಟೆನ್ನಿಸ್, ತಂಡಗಳು ಪ್ರಥಮ ಸ್ಥಾನಗಳಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಅಯ್ಕೆಗೊಂಡರೆ, ಶೆಟಲ್ ಬ್ಯಾಡ್ಮಿಟನ್, ವಾಲಿಬಾಲ್, ಖೋ-ಖೋ,400*4 ರಿಲೇ ತಂಡ, ದ್ವಿತೀಯ ಸ್ಥಾನವನ್ನು ಪಡೆದಿದೆ. ಇದಲ್ಲದೆ ಅಥ್ಲೆಟಿಕ್ ವಿಭಾಗದಲ್ಲಿ 3000 ಮೀಟರ್ ಹಾಗೂ ಬಾಲಕ ಮತ್ತು ಬಾಲಕಿಯರ ವಿಭಾಗದ ಕ್ರಾಸ್ ಕಂಟ್ರಿಯಲ್ಲಿ, 110 ಹರ್ಡಲ್ಸ್, ತ್ರಿಪಲ್ ಜಂಪ್, ಯೋಗಾಸನ, ರಿಧಮಿಕ್ ಯೋಗ, ಸ್ವರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, 3000 ಮೀಟರ್ ಓಟ, 5000 ಮೀಟರ್ ಓಟ, 110 ಹರ್ಡಲ್ಸ್ ನಲ್ಲಿ, ಹೈಜಂಪ್ ನಲ್ಲಿ, ಕ್ರಾಸ್ ಕಂಟ್ರಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದು ಒಟ್ಟಾರೆಯಾಗಿ ಇಡೀ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡು ಸಾಧನೆಗೈದಿದ್ದು.
ಈ ಒಂದು ಸಾಧನೆಗೆ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಭಾರಿ ಪ್ರಧಾನ ಕಾರ್ಯದರ್ಶಿಗಳಾದ ಅಂಬಾಪತಿ ಪಾಟೀಲ್, ಎಸ್.ಆರ್.ಪಿ.ಎಸ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಧವಲ್ ಜೋಬನಪುತ್ರ, ಕಾರ್ಯದರ್ಶಿಗಳಾದ ಸಚಿನ್ ಇನ್ನಾನಿ, ಕಾಲೇಜಿನ ಪ್ರಾಚಾರ್ಯರಾದ ರಾಘಮ್ಮ, ಹಿರಿಯ ಉಪನ್ಯಾಸಕರಾದ ವಿರೇಶ್ ಸೆರೆಗಾರ್, ದೈಹಿಕ ನಿರ್ದೇಶಕರಾದ ಮಲ್ಲೇಶ ಸೇರಿದಂತೆ ಉಪನ್ಯಾಸಕರುಗಳು ಸೇರಿದಂತೆ ಭೋದಕೇತರ ಸಿಬ್ಬಂದಿಗಳು ಹರ್ಷ ವಕ್ತಪಡಿಸಿ ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ಸಾಧನೆಗೈದು ರಾಜ್ಯಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಹಾರೈಸಿದರು.
ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ
ಸಮಗ್ರ ಚಾಂಪಿಯನ್ ಪಟ್ಟಗಿಟ್ಟಿಸಿಕೊಂಡ ಎಸ್.ಆರ್.ಪಿ.ಎಸ್ ಕಾಲೇಜು

Megha News > Local News > ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಸಮಗ್ರ ಚಾಂಪಿಯನ್ ಪಟ್ಟಗಿಟ್ಟಿಸಿಕೊಂಡ ಎಸ್.ಆರ್.ಪಿ.ಎಸ್ ಕಾಲೇಜು
ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಸಮಗ್ರ ಚಾಂಪಿಯನ್ ಪಟ್ಟಗಿಟ್ಟಿಸಿಕೊಂಡ ಎಸ್.ಆರ್.ಪಿ.ಎಸ್ ಕಾಲೇಜು
Tayappa - Raichur19/09/2024
posted on
Leave a reply