Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime NewsLocal News

ಕುರಿಗಳ ಹಿಂಡಿನ ಮೇಲೆ ಖಾಸಗಿ ಬಸ್ ಡಿಕ್ಕಿ, 150ಕ್ಕೂ ಅಧಿಕ ಕುರಿಗಳು ಸಾವು, ಪ್ರಕರಣ ದಾಖಲು

ಕುರಿಗಳ ಹಿಂಡಿನ ಮೇಲೆ ಖಾಸಗಿ ಬಸ್ ಡಿಕ್ಕಿ, 150ಕ್ಕೂ ಅಧಿಕ ಕುರಿಗಳು ಸಾವು, ಪ್ರಕರಣ ದಾಖಲು

ರಾಯಚೂರು.ಖಾಸಗಿ ಬಸ್ ಕುರಿಗಳ ಗುಂಪಿನ ಮೇಲೆ ಹಾಯಿಸದ್ದರಿಂದ 150ಕ್ಕೂ ಅಧಿಕ ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, 15 -20 ಕುರುಗಳಿಗೆ ಗಂಭೀರವಾಗಿ ಗಾಯವಾದ ಘಟನೆ ನಡೆದಿದೆ.

ನಗರದ ಯರಮರಸ್ ಬೈಪಾಸ್ ಬಳಿ ಬೆಳಗಿನ ಜಾವದಲ್ಲಿ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ನಿಂತಿದ್ದ ಕುರಿಗಳ ಗುಂಪಿನ ಮೇಲೆ ಹೈದರಾ ಬಾದ್ ನಿಂದ ರಾಯಚೂರು ಮೂಲಕ ಬೆಳಗಾವಿಗೆ ಹೊರಟಿದ್ದ ಖಾಸಗಿ ಬಸ್ಸಿನ ಚಾಲಕ ಕುರಿಗಳ ಗುಂಪಿನ ಮೇಲೆ ಹಾಯಿಸಿದ್ದಾನೆ, ಈ ವೇಳೆ ಸ್ಥಳದಲ್ಲಿಯೇ 150ಕ್ಕೂ ಅಧಿಕ ಕುರಿಗಳು ಸಾವನಪ್ಪಿದ್ದು, ಸುಮಾರು 20ಕುರಿಗಳಿಗೆ ಗಂಭೀರವಾಗಿ ಗಾಯಗಳಾಗಿದೆ‌.
ಕುರಿಗಳು ತೆಲಂಗಾಣದ ನಾರಾಯಣಪೂರ ಜಿಲ್ಲೆಯ ಓಬಳಾಪೂರ ಗ್ರಾಮದ ಮಲ್ಲೇಶ ಎನ್ನುವವರಿಗೆ ಸೇರಿದೆ ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮೀಣ ಪೋಲಿಸ್ ಠಾಣೆ ಪೋಲಿಸ್ ತೆರಳಿ ಖಾಸಗಿ ಬಸ್‌ನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮಾಹಿತಿ ತಿಳಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Megha News