ರಾಯಚೂರು. ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸುಪ್ರಿಂಕೋರ್ಟ ಆದೇಶ ನೀಡಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದೇ ವಿಳಂಬ ಧೋರಣೆ ಅನುಸರಿಸುತ್ತಿರುವದನ್ನು ವಿರೋಧಿಸಿ ಆ.೫ರಂದು ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಗಳಿಗೆ ಕಪ್ಪು ಪಟ್ಟಿ ಪ್ರದರ್ಶಿಸಿ ಘೇರಾವ್ ಮಾಡಲಾಗುತ್ತದೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ,ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿಯವರು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು. ಪ್ರಕರಣದ ಕುರಿತಂತೆ ಸುಪ್ರಿಂಕೋರ್ಟ ಏಳುಜನ ನ್ಯಾಯಮೂರ್ತಿ ಪೀಠ ರಾಜ್ಯ ಸರ್ಕಾರಗಳಿಗೆ ಒಳವರ್ಗೀಕರಣಕ್ಕೆ ಅವಕಾಶ ನೀಡಿದೆ. ಈಗಾಗಲೇ ಹರಿಯಾಶ ಸರ್ಕಾರ ಮೀಸಲಾತಿ ವರ್ಗೀಕರಣಕ್ಕೆ ಮಂದಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಮಲ್ಲಿಕಾರ್ಜುನ ಖರ್ಗೆಯವರ ಆದೇಶ ಬಂದರೆ ಮಾತ್ರ ಜಾರಿಗೊಳಿಸುದಾಗಿ ಹೇಳುತ್ತಿದೆ. ಸುಪ್ರಿಂಕೋರ್ಟ ಆದೇಶಕ್ಕಿಂತ ಯಾರು ದೊಡ್ಡವರಲ್ಲ. ಕೂಡಲೇ ಒಳ ಮೀಸಲಾಥಿ ವರ್ಗೀಕರಣಗೊಳಿಸಲು ವಿಳಂಬ ಮಾಡುತ್ತಿರುವದನ್ನು ಖಂಡಿಸಿ ಘೇರಾವ್ ಮಾಡಲಾಗುತ್ತದೆ.ಮಲ್ಲಿಕಾರ್ಜುನ ಖರ್ಗೆಯವರು ಮೀಸಲಾತಿ ರಾಜಕೀಯ ಮಾಡದೇ ಜಾರಿಗೆ ಕರ್ನಾಟಕ, ತೆಲಂಗಾಣ ಸೇರಿ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಿಗೆ ಸೂಚನೆ ನಿಡಬೇಕೆಂದು ಆಗ್ರಹಿಸಿದರು.
ಈ ಸಂದರ್ಬದಲ್ಲಿ ದುಳ್ಳಯ್ಯ ಗುಂಜಳ್ಳಿ, ರಂಜಿತ ದಂಡೋರ, ಅನಿಲಕುಮರ ತಲಮಾರಿ, ಹನುಮಂತು ಜುಲಂಗೇರಾ, ಭೀಮೇಶ ತುಂಟಾಪುರು, ನರಸಿಂಹಲು ಗಾಜರಾಳ, ದಾವೇದ ಮರ್ಚಟ್ಹಾಳ ಸೇರಿದಂತೆ ಅನೇಕರಿದ್ದರು.