ಸಿರವಾರ: ರಾಜಧನವಿಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಮೂರು ಟಿಪ್ಪರ್ ಗಳನ್ನು ಸಿರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾನ್ವಿಯಿಂದ ಗುಲ್ಬರ್ಗ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 3 ಟಿಪ್ಪರ್ ವಾಹನಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಪಾಸಣೆ ಮಾಡಿ ದಾಖಲೆಗಳಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಸಿರವಾರ ಪೊಲೀಸರು ಇದೀಗ ಟಿಪ್ಪರ್ ಚಾಲಕ ಮತ್ತು ಮಾಲೀಕನ ವಿರುದ್ಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Megha News > Local News > ಅಕ್ರಮ ಮರಳು ಸಾಗಾಣಿಕೆ, 3 ಟಿಪ್ಪರ್ ಪೊಲೀಸ್ ವಶಕ್ಕೆ ಪ್ರಕರಣ ದಾಖಲು