ರಾಯಚೂರು, ಮುನ್ನೂರು ಕಾಪು ಸಮಾಜದಿಂದ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿ ಹಬ್ಬಕ್ಕೆ ಮೆರುಗು ತಂದಿದೆ ಎಂದು ಹಿಂದುಳಿದ ವರ್ಗದ ಅಧ್ಯಕ್ಷ ಕೆ. ಶಾಂತಪ್ಪ ಅವರು ಹೇಳಿದರು.
ನವರಾತ್ರಿ ಉತ್ಸವದ ಅಂಗವಾಗಿ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ತಬಲ ಭರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಗಾರು ನಂತರ ನವರಾತ್ರಿ ಉತ್ಸವವನ್ನು ಮುನ್ನೂರು ಕಾಪು ಸಮಾಜ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ ಎಂದರು. ಎ. ಪಾಪಾರೆಡ್ಡಿ ಅವರಿಗೆ ದೊರೆತ ಐಕಾನ್ ಲೆಜೆಂಡ್ ಪ್ರಶಸ್ತಿ ಇಡೀ ಮುನ್ನೂರು ಕಾಪು ಸಮಾಜಕ್ಕೆ ಸಲ್ಲುತ್ತದೆ. ಮುನ್ನೂರು ಕಾಪು ಸಮಾಜವನ್ನು ಎಲ್ಲ ರಂಗಗಳಲ್ಲಿ ಗುರುತಿಸುವಂತ ಮಾಡಿದ ಅವರಿಗೆ ಐಕಾನ್ ಲೆಜೆಂಡ್ ಪ್ರಶಸ್ತಿಗೆ ಭಾಜನಾರಾಗಿದ್ದಾರೆ. ಮುನ್ನೂರು ಕಾಪು ಸಮಾಜ ಅಭಿವೃದ್ಧಿಗೆ ಪಾಪಾರೆಡ್ಡಿ ಕೊಡುಗೆ ಅಪಾರ ಇದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡು ಜನಪರ ಕಾರ್ಯಕ್ರಮದಲ್ಲಿ ತೋಡಿಗಿಸಿಕೊಳ್ಳಬೇಕು. ಪಾಪಾರೆಡ್ಡಿ ಅವರ ಮಾರ್ಗದರ್ಶನದಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದೇನೆ ಎಂದರು. ಮುಂಗಾರು ಸಾಂಸ್ಕೃತಿಕ ನಂತರ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುವುದರ ಮೂಲಕ ಸಮಾಜವನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿದ ಕೀರ್ತಿ ಎ. ಪಾಪಾರೆಡ್ಡಿ ಅವರಿಗೆ ಸಲ್ಲುತ್ತದೆ ಎಂದರು. ಎ.ಪಾಪಾರೆಡ್ಡಿ ಅವರು ಸಮಾಜದ ಕೀರ್ತಿ ಪಾತೆಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಿಸಿದ್ದಾರೆ ಎಂದರು.
ಮುನ್ನೂರುಕಾಪು ಸಮಾಜ ಸಾಮಾಜಿಕ,ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಯಲ್ಲಿ ಅಭಿವೃದ್ಧಿಯಲ್ಲಿ ಬಲಿಷ್ಠ ಸಮಾಜವಾಗಿ ಗುರುತಿಸಿಕೊಂಡಿದೆ.ಮುನ್ನೂರು ಕಾಪು ಸಮಾಜ ಶೈಕ್ಷಣಿಕ ಆರ್ಥಿಕ ರಾಜಕೀಯವಾಗಿ ಸಮಾಜ ಅಭಿವೃದ್ಧಿಯಾಗಿದೆ ಎಂದರು. ಸಾಂಸ್ಕೃತಿಕ ರೂವಾರಿ ಎ. ಪಾಪಾರೆಡ್ಡಿ ಮತ್ತು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಅವರ ನೇತೃತ್ವದಲ್ಲಿ ಸಮಾಜ ಬಾನೆತರಕ್ಕೆ ಬೆಳೆದಿದೆ ಎಂದರು.ಪಾಪಾರೆಡ್ಡಿ ಅವರು ತಮ್ಮ ಜೀವನವನ್ನು ಸಮಾಜ ಏಳಿಗೆಗೆ ಮೀಸಲಿಟ್ಟದ್ದಾರೆ ಎಂದರು. ಮುನ್ನೂರುಕಾಪು ಸಮಾಜವು ಬಲಿಷ್ಠ ಸಮಾಜವಾಗಿದೆ. ರಾಜಕೀಯ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಎಲ್ಲಾ ಸಮಾಜದವರನ್ನು ಸೇರಿಸಿಕೊಂಡು ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜದಲ್ಲಿ ಸಾಮರಸ್ಯ ತರಲು ನೇತೃತ್ವ ವಹಿಸಿದೆ.ಸಾಹಿತ್ಯ, ನೃತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಈ ಭಾಗಕ್ಕೆ ಹೆಚ್ಚಿನ ಮೆರಗು ತರುತ್ತಿದೆ.ಮುನ್ನೂರುಕಾಪು ಸಮಾಜ ಲಕ್ಷಾಂತರ ರೂ.ವೆಚ್ಚ ಮಾಡಿ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸುತ್ತಿವೆ. ಈ ರೀತಿಯ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಕಲೆ ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ದೊರೆಯುವುದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜೀವಂತವಾಗಿ ಉಳಿಯುವಂತೆ ಮುನ್ನೂರು ಕಾಪು ಸಮಾಜ ನಿರ್ವಹಿಸುತ್ತಿದೆ ಎಂದರು.
ಮುನ್ನೂರು ಕಾಪು ಸಮಾಜದ ಅಧ್ಯಕ್ಷ
ಬೆಲ್ಲಂ ನರಸರೆಡ್ಡಿ ಮಾತನಾಡುತ್ತಾ,ಮುಂಗಾರು ನಂತರ ನವರಾತ್ರಿ ಹಬ್ಬದ ಹರಿದಿನಗಳಲ್ಲಿ ಸಾಂಸ್ಕೃತಿಕ ಈ ಕಾರ್ಯಕ್ರಮ ಯಶಸ್ವಿಗೆ ಪದಾಧಿಕಾರಿಗಳು ಸದಸ್ಯರು ಹಾಗೂ ಇನ್ನಿತರ ಸಮಾಜದ ಮುಖಂಡರುಗಳು ಹಾಗೂ ಆತ್ಮೀಯರು ಸೇರಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಯಶಸ್ವಿಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು. ಸುಮಾರು ಏಳು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದ್ಬುತ ನೃತ್ಯ ಪ್ರದರ್ಶನ ಮಾಡಿದರು.ನೂರಾರು ಜನ ಕಲಾಭಿಮಾನಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಅಮರೇಶ ಅವರು ಕಾರ್ಯಕ್ರಮದ ಸ್ವಾಗತ ಕೋರಿದರು.ಇಂದಿನ ಕಾರ್ಯಕ್ರಮದಲ್ಲಿ ರಾಜೇಶ್ವರಿ ಉಪನ್ಯಾಸ ಕಾರ್ಯಕ್ರಮ ನೇರೆವೆರಿಸಿದರು.
ಈ ಸಂದರ್ಭದಲ್ಲಿ ನವರಾತ್ರಿ ಸಾಂಸ್ಕೃತಿಕ ರೂವಾರಿ ಎ.ಪಾಪಾರೆಡ್ಡಿ,ಕೆ. ನರಸಿಂಹಲು,ಬಂಗಿ ನರಸರೆಡ್ಡಿ, ವಿ. ರಾಘವೇಂದ್ರರೆಡ್ಡಿ, ಎನ್ ಕೇಶವರೆಡ್ಡಿ, ಪಿ. ಚಂದ್ರಶೇಖರರೆಡ್ಡಿ, ಯು.ಗೋವಿಂದರೆಡ್ಡಿ, ಎಸ್ ಜನಾರ್ದನರೆಡ್ಡಿ, ಎಸ್ ಪ್ರತಾಪ್ ರೆಡ್ಡಿ,ಜಿ. ತಿಮ್ಮರೆಡ್ಡಿ, ಪುಂಡ್ಲ ರಾಜೇಂದ್ರರೆಡ್ಡಿ, ಟಿ. ಮಲ್ಲೇಶ ಸೇರಿದಂತೆ ಮುನ್ನೂರು ಕಾಪು ಸಮಾಜ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.