Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Entertainment NewsLocal News

ನವರಾತ್ರಿಯ ಏಳನೇ ದಿನದ ಸಾಂಸ್ಕೃತಿಕ ಸಂಭ್ರಮ, ಮುನ್ನೂರು ಕಾಪು ಸಮಾಜ ಸಂಸ್ಕಾರ, ಸುಂಸ್ಕೃತಿ ಜಗತ್ತಿಗೆ ಸಾರುತ್ತಿದೆ-ಬಸವರಾಜ

ನವರಾತ್ರಿಯ ಏಳನೇ ದಿನದ ಸಾಂಸ್ಕೃತಿಕ ಸಂಭ್ರಮ, ಮುನ್ನೂರು ಕಾಪು ಸಮಾಜ ಸಂಸ್ಕಾರ, ಸುಂಸ್ಕೃತಿ ಜಗತ್ತಿಗೆ ಸಾರುತ್ತಿದೆ-ಬಸವರಾಜ

ರಾಯಚೂರು-ಮುನ್ನೂರು ಕಾಪು ಸಮಾಜ ಒಂದಡೆ ಸಂಸ್ಕಾರ ಮತ್ತೊಂದಡೆ ಸುಸಂಸ್ಕೃತಿಯನ್ನು ಜಗತ್ತಿಗೆ ಸಾರುತ್ತಿದೆ ಎಂದು ಎ ಎಂ ಇ ಡೆಂಟಲ್ ಕಾಲೇಜು ಕಾರ್ಯದರ್ಶಿ ದರೂರು ಬಸವರಾಜ ಅವರು ಹೇಳಿದರು.

ನಗರದ ಗಾದ್ವಲ್ ರಸ್ತೆಯ ಮುನ್ನೂರುಕಾಪು ಸಮಾಜ ಮಾತಾ ಲಕ್ಷ್ಮಮ್ಮ ದೇವಿ ಹಾಗೂ ಕಾಳಿಕಾದೇವಿ ದೇವಸ್ಥಾನದಲ್ಲಿ ಆಯೋಜಿಸಿದ ಏಳನೇ ದಿನದ ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ತಬಲಾ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ, ನಾನು ಚಿಕ್ಕವನು ಇದ್ದಾಗ ನವರಾತ್ರಿ ಉತ್ಸವವನ್ನು ವೆಂಕಟೇಶ್ವರ ದೇವಸ್ಥಾನದಲ್ಲಿ ನಿರ್ವಹಿಸಲಾಗುತ್ತಿದೆ. ಲಕ್ಸ್ಮಮ್ಮದೇವಿ ಕಾಳಿಕಾದೇವಿಯ ಸನ್ನಿದ್ಯಾನದಲ್ಲಿ ಮುನ್ನೂರು ಕಾಪು ಸಮಾಜ ಎಲ್ಲ ಸಮುದಾಯದಗಳನ್ನು ಸೇರಿಸಿಕೊಂಡು ವಿಶಿಷ್ಟವಾಗಿ ಆಚರಣೆ ಮಾಡುತ್ತಾ ಜಿಲ್ಲೆಯ ಜನತೆಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರೇರೆಪಿಸುತ್ತಿದೆ ಎಂದರು.ನಮ್ಮ ಜೀವನ ಸಾರ್ಥಕವಾಗಬೇಕಾದರೆ ಸಮಾಜ ಸೇವೆಯಲ್ಲಿ ತೊಡಗಿ ಜೀವನ ಸಾರ್ಥಕ ಗೊಳಿಸಬೇಕು. ಇಂತಹ ಕಾರ್ಯ ಮುನ್ನೂರು ಕಾಪು ಸಮಾಜ ಸುಮಾರು ವರ್ಷಗಳಿಂದ ಮಾಡಿಕೊಂಡು ಒಂದು ಜಗತ್ತಿನಲ್ಲಿ ತಮ್ಮ ನಾಗರಿಕರಾಗಿ ಹೊರಹೊಮ್ಮಿದೆಂದರು.
ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು, ಸಮಾಜವನ್ನು ಒಗ್ಗೂಡಿಸುವುದರ ಮೂಲಕ ಸಂಸ್ಕಾರ ಮತ್ತು ಸಾಂಸ್ಕೃತಿಯನ್ನು ರಕ್ಷಣೆ ಮಾಡುತ್ತಾ ಇತರ ಸಮಾಜಕ್ಕೆ ಮಾದರಿಯಾಗಿದ್ದಾರೆ.ಮುನ್ನೂರು ಕಾಪು ಸಮಾಜ ಸುಂಸ್ಕೃತವನ್ನು ಜಗತ್ತಿಗೆ ಸಾರುತ್ತಿದೆ.ಅವರ ಈ ಸಾಮಾಜಿಕ ಕಾರ್ಯ ಶ್ಲಾಘನೀಯ. ಧರ್ಮ ರಕ್ಷಣೆ ಮಾಡವುದೇ ದಸರಾ ಮಹೋತ್ಸವ ಮುಖ್ಯ ಉದ್ದೇಶ. ಸಾಂಸ್ಕೃತಿಕ ಮತ್ತು ಧರ್ಮ ರಕ್ಷಣೆ ಮಾಡುವಲ್ಲಿ ಮುನ್ನೂರುಕಾಪು ಮುಂಚಣಿಯಲ್ಲಿದೆ ಎಂದರು. ದೇಶದ ಮೂಲೆ ಮೂಲೆಗಳಿಂದ ಕಲಾ ತಂಡಗಳನ್ನು ಕರೆ ತಂದು ಅತ್ಯಂತ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುನ್ನೂರು ಕಾಪು ಸಮಾಜ ಇತರೇ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಿರೀಶ್ ಕನಕವೀಡ್ ಮಾತನಾಡಿ,ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸುತ್ತಿರುವುದು ಸುಲಭವಲ್ಲ ಸಮಾಜದ ಹಿರಿಯ ಮುಖಂಡರೂ ಮಾಜಿ ಶಾಸಕರು ಎ. ಪಾಪಾರೆಡ್ಡಿ ಅವರು ಕರ್ನಾಟಕ ಸಂಘದಲ್ಲಿ ನವರಾತ್ರಿ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು.ಇದರ ಸ್ಫೂರ್ತಿದಾಯಕವಾಗಿ ಕಾಲಘಟ್ಟದಲ್ಲಿ ಎ. ಪಾಪಾರೆಡ್ಡಿ ಅವರು ಕಳೆದ ಅನೇಕ ವರ್ಷಗಳಿಂದ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಮುನ್ನೂರು ಕಾಪು ಸಮಾಜ ಬಲಿಷ್ಠ ಸಮಾಜ ಈ ಸಮಾಜದಿಂದ ಮಾತ್ರ ಜಿಲ್ಲೆಯಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸುವ ಶಕ್ತಿ ಈ ಸಮಾಜಕ್ಕೆ ಮಾತ್ರ ಇದೆ. ಎ.ಪಾಪಾರೆಡ್ಡಿ ಅವರು ಸರ್ವ ಸಮುದಾಯದಗಳನ್ನು ಒಗ್ಗೂಡಿಸಿಕೊಂಡು ಜಿಲ್ಲೆಯ ಜನತೆಗೆ ಸಾಂಸ್ಕೃತಿಕ ಕಣ್ಣು ತುಂಬಿಸಿಕೊಳ್ಳುವಂತೆ ಮಾಡುತ್ತಿದ್ದಾರೆ.
ಉಪನ್ಯಾಸಕಾರಿ ಆಗಮಿಸಿದ ರಾಜಶ್ರೀ ಕಲ್ಲೂಕರ್ ಅವರು ಮಾತನಾಡಿ,ಭಕ್ತಿ ಸಂಸ್ಕೃತಿಯನ್ನು ಪರಿಚಯ ಮಾಡುತ್ತಿರುವುದು ಮುನ್ನೂರು ಕಾಪು ಸಮಾಜ ಕಾರ್ಯ ಶ್ಲಾಘನೆ ಎಂದರು.ಕಾಳಿ ಮಹಾರಾತ್ರಿ ಮಹೋರಾತ್ರಿ ಎಂದು ವರ್ಣಿಸಲಾಗಿದೆ.ನವರಾತ್ರಿ ಕಾರ್ಯಕ್ರಮದ ದಸರಾ ಉತ್ಸವ ಅಂಗವಾಗಿ ಆಚರಿಸುವ 9 ದಿನಗಳ ನವರಾತ್ರಿ ಕುರಿತು ಜನರಿಗೆ ತಿಳಿಯಪಡಿಸಿದರು.
ಮುರುಳಿಧರ್ ಕುಲಕರ್ಣಿ ಕಾರ್ಯಕ್ರಮ ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದರು. ಮಹೇಂದ್ರರೆಡ್ಡಿ
ಅವರು ಕಾರ್ಯಕ್ರಮ ಸ್ವಾಗತಿಸಿದರು.
ಸುಮಾರು 6 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡು ಅದ್ಬುತ ನೃತ್ಯ ಪ್ರದರ್ಶನ ನೀಡಿದರು.ಸ್ಪರ್ಧೆ ನಿರ್ಣಾಯಕರಾಗಿ ಶಾಂತ ಕುಲಕರ್ಣಿ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ನವರಾತ್ರಿ ಉತ್ಸವ ರೂವಾರಿ ಮಾಜಿ ಶಾಸಕ ಮುನ್ನೂರು ಕಾಪು ಸಮಾಜದ ಹಿರಿಯ ಮುಖಂಡರು ಎ. ಪಾಪಾರೆಡ್ಡಿ, ಭೀಮಣ್ಣಗೌಡ ಇಟಗಿ, ಜಿ. ಶಿವಮೂರ್ತಿ,ಅಂಗಡಿ ತಿಮ್ಮಾರೆಡ್ಡಿ,ಜಿ. ತಿಮ್ಮರೆಡ್ಡಿ ಮಾಸ್ಟರ್, ಕುಕ್ಕಲ್ ನರಸಿಂಹಲು,ವೆಂಕಟೇಶ,
ಮುನ್ನೂರು ಕಾಪು ಸಮಾಜ ಹಿರಿಯ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.

Megha News