ರಾಯಚೂರು. ಬೃಹದಾಕಾರದ ಕಲ್ಲು ಬಂಡೆಯೊಂದು ಆಟವಾಡುತ್ತಿದ್ದ ಮಕ್ಕಳ ಮೇಲೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಮೃತಪಟ್ಟಿದ್ದು ಆಸ್ಪತ್ರೆಯಲ್ಲಿ ಒರ್ವ ಬಾಲಕ ಮೃತಪಟ್ಟ ಘಟನೆ ಲಿಂಗಸೂಗೂರು ತಾಲೂಕಿನ ಗೌಡೂರು ತಾಂಡದಲ್ಲಿ ನಡೆದಿದೆ.
ಮೃತಪಟ್ಟಿರುವ ಮಕ್ಕಳು ಮಂಜುನಾಥ, ವೈಶಾಲಿ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ರಘು(8) ಬಾಲಕನ ಕಾಲು ಮುರಿದು ಗಂಭೀರ ವಾಗಿ ಗಾಯಗೊಂಡಿದ್ದು,
ಗಾಯಗೊಂಡ ರಘುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಈ ಕುರಿತು ಲಿಂಗಸೂಗುರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಘಟನೆ ವಿವರ:- ರಜೆ ಇರುವ ಕಾರಣ ಪೋಷಕರೊಂದಿಗೆ ಜಮೀನುನಿಗೆ ತೆರಳಿ ಆಟವಾಡುತ್ತಿದ್ದರು, ಜಮೀನುನಲ್ಲಿ ಬೃಹದಾಕಾರದ ಬಂಡೆಯ ಕೆಳಗೆ ಆಟವಾಡುವ ವೇಳೆ ಬಂಡೆಯು ಕುಸಿದು ಮಕ್ಕಳ ಮೇಲೆ ಉರುಳಿ ಬಿದ್ದಿದೆ. ಮಕ್ಕಳು ಚೀರಾಟ ಕೇಳಿ ಪೋಷಕರು ಬಂಡೆ ಎತ್ತಲು ಪ್ರಯತ್ನಿಸಿದರೂ ಬಂಡೆ ಕಲ್ಲು ಎತ್ತಲು ಆಗಲಿಲ್ಲ, ಮಕ್ಕಳು ಕಣ್ಣೆದುರೆ ಮೃತಪಟ್ಟಿದ್ದು ಆಕ್ರಂದನ ಮುಗಿಲು ಮುಟ್ಟಿದೆ.
ಮತ್ತೊಬ್ಬ ಬಾಲಕ ಕಾಲು ಮುರಿದಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಮೂರು ಜನ ಮಕ್ಕಳು ಮೂರನೇ ತರಗತಿಯಲ್ಲಿ ಓದುತ್ತಿದ್ದು ಎನ್ನಲಾಗಿದೆ.