Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime News

ರಾಜಹಂಸ ಬಸ್, ಟಾಟಾ ಏಸ್ ನಡುವೆ ಬೀಕರ ಅಪಘಾತ, ಚಿಂತಾಜನಕ ಸ್ಥಿತಿಯಲ್ಲಿ ಚಾಲಕ‌

ರಾಜಹಂಸ ಬಸ್, ಟಾಟಾ ಏಸ್ ನಡುವೆ ಬೀಕರ ಅಪಘಾತ, ಚಿಂತಾಜನಕ ಸ್ಥಿತಿಯಲ್ಲಿ ಚಾಲಕ‌

ಸಿರವಾರ: ಟಾಟಾ ಏಸ್ ಗೂಡ್ಸ್ ವಾಹನ ಮತ್ತು ರಾಜಹಂಸ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಟಾಟಾ ಏಸ್ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ತಾಲೂಕಿನ ಅತ್ತನೂರು ಗ್ರಾಮದ ಹೊರವಲಯದಲ್ಲಿ ಜರುಗಿದೆ.

ಲಿಂಗಸುಗೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಬಸ್ ಹಾಗೂ ರಾಯಚೂರಿನಿಂದ ಅತ್ತನೂರು ಗ್ರಾಮಕ್ಕೆ ಹೊರಟಿದ್ದ ಟಾಟಾ ಏಸ್ ನಡುವೆ ಅಪಘಾತ ಉಂಟಾಗಿದೆ. ಇದರ ಪರಿಣಾಮವಾಗಿ ಟಾಟಾ ಏಸ್ ವಾಹನ ಇಬ್ಭಾಗವಾಗಿದೆ.
ಗಾಯಾಳುವನ್ನು ಅತ್ತನೂರು ಅತ್ತನೂರು ಟಾಟಾ ಏಸ್ ಚಾಲಕ ಸಮೀರ್ (24) ಎಂದು ತಿಳಿದು ಬಂದಿದೆ.
ಗಂಭೀರವಾಗಿ ಗಾಯಗೊಂಡ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಸುರಕ್ಷಾ ಆಸ್ಪತ್ರೆಗೆ ದಾಖಲಿಸಲಾಗಿದೆ‌.
ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟ್ರಾಫಿಕ್ ಜಾಮ್: ಈ ಘಟನೆಯಿಂದ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

Megha News