ರಾಯಚೂರು: ನ.11 ನಗರದ ಶಿಶುಕೇಂದ್ರೀಕೃತ ಶೈಕ್ಷಣಿಕ ಯೋಜನೆಯಡಿ ಇಲಾಖಾ ಅಧೀನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ನಡೆಯುತ್ತಿರುವ ವಿಶೇಷ ಶಾಲೆಗಳಾದ ಶ್ರೀ ಮಾಣಿಕ್ ಪ್ರಭು ಅಕಾಡೆಮಿ ಫಾರ್ ದಿ ಬ್ಲಾಂಡ್ ಸ್ಕೂಲ್ ರಾಯಚೂರು (ಅಂಧತ್ವ ಶಾಲೆ ಎಲ್.ವಿ.ಡಿ ಕಾಲೇಜು ಹತ್ತಿರ), ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಂಸ್ಥೆ (ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಹಾಗೂ ವಸತಿಯುತ ಶಾಲೆ –ನಿಜಲಿಂಗಪ್ಪ ಕಾಲೋನಿ ) ಮತ್ತು ಆಶಾದೀಪಾ ವಿಶೇಷ (ಬುಧ್ಧಿಮಾಂದ್ಯ ಮಕ್ಕಳ ಶಾಲೆ)- ಪಬ್ಲಿಕ್ ಗಾರ್ಡನ ಹಾಗೂ ನಗರದ ಆಶಾಪೂರ ರಸ್ತೆಯಲ್ಲಿರುವ ಸ್ನೇಹ ಭಾರತಿ ಎಜುಕೇಷನ್ ಸೊಸೈಟಿ, ಬೆಂಗಳೂರು ಸಂಸ್ಥೆ ವತಿಯಿಂದ ನಿರ್ವಹಿಸಲಾಗುತ್ತಿರುವ ಹಿರಿಯ ನಾಗರೀಕರ ವೃದ್ಧಾಶ್ರಮ ಕೇಂದ್ರಕ್ಕೆ ರಾಯಚೂರು ಜಿಲ್ಲಾ ಪಂಚಾಯತ್, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪಾಂಡ್ವೆ ರಾಹುಲ್ ತುಕಾರಾಮ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಶಿಶುಕೇಂದ್ರೀಕೃತ ಶೈಕ್ಷಣಿಕ ಯೋಜನೆಯಡಿ ಇಲಾಖಾ ಅಧೀನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ನಡೆಯುತ್ತಿರುವ ವಿಶೇಷ ಶಾಲೆಗಳಾದ ಶ್ರೀ ಮಾಣಿಕ್ ಪ್ರಭು ಅಕಾಡೆಮಿ ಫಾರ್ ದಿ ಬ್ಲಾಂಡ್ ಸ್ಕೂಲ್ ರಾಯಚೂರು ಅಂಧತ್ವ ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ – 59, ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಶಿಕ್ಷಣ ಸೇವಾಶ್ರಮ ಸಂಸ್ಥೆ ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಹಾಗೂ ವಸತಿಯುತ ಶಾಲೆಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ – 78 ಮತ್ತು ಆಶಾದೀಪಾ ವಿಶೇಷ ಬುಧ್ಧಿಮಾಂದ್ಯ ವಸತಿ ರಹಿತ ಮಕ್ಕಳ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ – 43 ಹಾಗೂ ನಗರದ ಆಶಾಪೂರ ರಸ್ತೆಯಲ್ಲಿರುವ ಸ್ನೇಹ ಭಾರತಿ ಎಜುಕೇಷನ್ ಸೊಸೈಟಿ, ಬೆಂಗಳೂರು ಸಂಸ್ಥೆ ವತಿಯಿಂದ ನಿರ್ವಹಿಸಲಾಗುತ್ತಿರುವ ಹಿರಿಯ ನಾಗರೀಕರ ವೃದ್ಧಾಶ್ರಮ ಕೇಂದ್ರದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ ಕುರಿತು ಪರಿಶೀಲಿಸಲಾಯಿತು ಮತ್ತು ಕಾಲಕಾಲಕ್ಕೆ ವೈದ್ಯರ ತಪಾಸಣಾ ಕೈಗೊಳ್ಳುತ್ತಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು ಹಾಗೂ ಶಾಲೆಗಳಿಗೆ ಅಗತ್ಯವಿರುವ ಶಾಲಾ ವಾಹನ ಖರೀದಿಗಾಗಿ ಮತ್ತು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಿಗೆ ನಗರ ಸಭೆಯ ವ್ಯಾಪ್ತಿಗೊಳಪಡುವ ವಸತಿ ಬಡಾವಣೆಗಳಲ್ಲಿ CA ನಿವೇಶನಕ್ಕಾಗಿ ಸಕ್ಷಮ ಪ್ರಾಧಿಕಾರಿಗಳಿಗೆ ಸಂಬಂಧಿತ ಶಾಲೆಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಿದಲ್ಲಿ ಜಿಲ್ಲಾಡಳಿತದಂದ ನಿವೇಶನ ವ್ಯವಸ್ಥೆಗೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ ಮಂಜುನಾಥ, ಮುಖ್ಯ ಗುರುಗಳು, ಶಾಲಾಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.