ರಾಯಚೂರು,ನ,೧೩- ಮಲಿಯಬಾದ್ ಗ್ರಾಮದ ಗುಡ್ಡದಲ್ಲಿ ಜಾನುವಾರಗಳನ್ನು ತಿಂದು ಹಾಕಿರುವಚಿರತೆ ಪತ್ತೆಗೆ ಅರಣ್ಯ ಇಲಾಖೆ ಮುಂದಾಗಿ ಎರಡು ತಂಡಗಳನ್ನು ರಚಿಸಿದೆ.
ಮಲಿಯಾಬಾದ್ ಗುಡ್ಡಗಾಡು ಪ್ರದೇಶದಲ್ಲಿ ೪ ಬೋನ್‌ಗಳನ್ನು ಅಳವಡಿಸಿ ಎರಡು ತಂಡಗಳೊಂದಿಗೆ ಹುಡುಕಾಟ ಪ್ರಾರಂಭಿಸಿದೆ.
ಮಲಿಯಾಬಾದ್ ಗ್ರಾಮದ ನಿವಾಸಿ ಈರೇಶ ಎಂಬುವವರಿಗೆ ಸೇರಿದ ಎತ್ತು ಮತ್ತು ಕರುಗಳ ಮೇಲೆ ಚಿರತೆ ದಾಳಿ ನಡೆಸಿರುವ ಕುರಿತು ಕುರುವುಗಳು ಪತ್ತೆಯಾಗಿವೆ. ಕರುಗಳ ಮೇಲೆ ದಾಳಿಯ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇರುವ ೧೨ ಜನರ ತಂಡ ಮಲಿಯಾಬಾದ್ ಅರಣ್ಯ ಪ್ರದೇಶದ ಬಳಿ ಬಿಡಾರ ಹೂಡಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಸಾರ್ವಜನಿಕರು ಗುಡ್ಡದ ಬಳಿ ಅನವಶ್ಯಕವಾಗಿ ಸಂಚರಿಸಿದಂತೆ ಎಚ್ಚೆರಿಕೆ ನೀಡಿದ್ದಾರೆ. ಜಾನುವಾರುಗಳ ಮಾಲೀಕರು ರಾತ್ರಿ ವೇಳೆ ದನಕರುಗಳನ್ನು ಮನೆಯ ಜಮೀನಿನಲ್ಲಿ ಕಟ್ಟಬೇಕು ಎಂದು ಅರಣ್ಯ ಇಲಾಖೆಯ ವಲಯ ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.
ವಲಯ ಅರಣ್ಯ ಅಧಿಕಾರಿ ರಾಜೇಶ, ಉಪ ವಲಯ ಅರಣ್ಯ ಅಧಿಕಾರಿ ಮೌನೇಶ, ಗಸ್ತು ಅರಣ್ಯ ಪಾಲಕ ಭೀಮೇಶಪ್ಪ, ಯಲ್ಲಪ್ಪ, ಈರೇಶ, ಬಸವರಾಜ, ನರೇಶ ಸೇರಿದಂತೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು. ಕಳೆದ ಎರಡು ತಿಂಗಳನಿಂದ ಜನರು ಕಾಡುತ್ತಿರುವ ಚಿರತೆ ಪತ್ತೆ ಕಾರ್ಯಚರಣೆ ಚುರುಕು ಗೊಂಡಿದೆ.
Megha News > Local News > ಮಲಿಯಾಬಾದ ಗ್ರಾಮದ ಗುಡ್ಡದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ: ಅರಣ್ಯ ಇಲಾಖೆ ಎರಡು ಬಿಡಾರ
ಮಲಿಯಾಬಾದ ಗ್ರಾಮದ ಗುಡ್ಡದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ: ಅರಣ್ಯ ಇಲಾಖೆ ಎರಡು ಬಿಡಾರ
Tayappa - Raichur13/11/2024
posted on
Leave a reply