ರಾಯಚೂರು,ನ.೧೪-ಹಟ್ಟಿ ಚಿನ್ನದ ಗಣಿಯಿಂದ ನೀಡಲಾಗಿದ್ದ ೩೦ಲಕ್ಷ ರೂ ಅನುದಾನ ಬಳಸುವಲ್ಲಿ ನಿಯಮಾವಳಿ ಉಲ್ಲಂಘಿಸಿರುವದು ತನಿಖೆಯಿಂದ ಸಾಭೀತಾಗಿರುವರಿಂದ ದೇವದುರ್ಗಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಇವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಕಲ್ಬುರ್ಗಿ ಅಪರ ಆಯುಕ್ತ ಆಕಾಶ ಅದೇಶಿಸಿದ್ದಾರೆ.
೨೦೨೩ ಡಿಸೆಂಬರ್ ನಲ್ಲಿ ಊಟಿ ಶಾಲೆಗೆ ಭೂಮಿ ಖರೀದಿಸಲು ೩೦ ಲಕ್ಷ ರೂ ಗಳನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಹಣವನ್ನು ನೀಡಿತ್ತು. ನಿಯಾವಳಿಯಂತೆ ಸಕ್ಷಮ ಪ್ರಾಧಿಕಾರ ಗಮನಕ್ಕೆ ತಾರದೆ ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ ಹಣವನ್ನು ಹಳೆ ಎಸ್ಡಿಎಂಸಿ ಖಾತೆಗೆ ಜಮಾ ಮಾಡಿ ಕರ್ತವ್ಯ ಲೋಪ ಎಸಗಿರುವದು ತನಿಖೆಯಿಂದ ಪತ್ತೆಯಾಗಿತ್ತು.ಶಿಕ್ಷಕರ ವರ್ಗಾವಣೆಯಲ್ಲಿ ಹಣ ವಸೂಲಿ ಸೇರಿದಂತೆ ನಿಯಮ ಉಲ್ಲಂಘನೆ ಕುರಿತು ಸುರೇಶ ನಾಯಕ ಗೌರಂಪೇಟೆ ನೀಡಿದ ದೂರಿನ ಮೇರೆಗೆ ಇಲಾಖೆ ತನಿಖೆ ನಡೆಸಿ ನೀಡಿದ್ದ ವರದಿ ಅಧಾರಸಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.ಶಿಸ್ತುಕ್ರಮ ಕಾಯ್ದಿರಿಸಲಾಗಿದೆ.ಖಾಲಿಯಾಗಿರುವ ಬಿಇಓ ಹುದ್ದೆಗೆ ಪ್ರಭಾರಿಯಾಗಿ ಡಯಟ್ ಉಪನ್ಯಾಸಕ ಮಲ್ಲಿಕಾರ್ಜುನ ಎಂಬುವವರನ್ನು ನಿಯುಕ್ತಿಗೊಳಿಸಲಾಗಿದೆ.
Megha News > Local News > ಕರ್ತವ್ಯ ಲೋಪ ದೇವದುರ್ಗ ಬಿಇಓ ಸುಖದೇವ ಕರ್ತವ್ಯದಿಂದ ಬಿಡುಗಡೆ
ಕರ್ತವ್ಯ ಲೋಪ ದೇವದುರ್ಗ ಬಿಇಓ ಸುಖದೇವ ಕರ್ತವ್ಯದಿಂದ ಬಿಡುಗಡೆ
Tayappa - Raichur14/11/2024
posted on

Leave a reply