Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsLocal News

ಅಕ್ರಮ ಸೇಂಧಿ ಮಾರಾಟ:ನಗರದಲ್ಲಿ ಮೂವರ ಬಂಧನ

ಅಕ್ರಮ ಸೇಂಧಿ ಮಾರಾಟ:ನಗರದಲ್ಲಿ ಮೂವರ ಬಂಧನ

ರಾಯಚೂರು,ನ.೨೨- ನಗರದ ವಾರ್ಡ೩೧ ರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿ ನಿಷೇಧಿತ ರಾಸಾಯನಿಕ ಬಳಸಿ ಸೇಂಧಿ ಮಾರಾಟದಲ್ಲಿ ತೊಡಗಿದ್ದ ಮೂವರನ್ನು  ಬಂಧಿಸಿದ್ದಾರೆ.

ಗುರುವಾರ ಸಂಜೆ ಧಾಳಿ ನಡೆಸಿರುವ ಅಧಿಕಾರಿಗಳು ಲಕ್ಷ್ನಣ  ಇವರ‌ ಮನೆ ಮೇಲೆ ಧಾಳಿ ನಡೆಸಿ  ಕೈ ಹೆಂಡ ತಯಾರಿಸಲು ಬಳಸುವ ಅಲ್ಫಾ ಜೋಲ್ಮಂ, ಸಿಎಚ್ ಪೌಡರ್, ಬಿಳಿ ಪೇಸ್ಟ ಸೇರಿದಂತೆ ೭೦ ಲೀಟರ್ ಸೇಂಧಿ  ಜಪ್ತಿ ಮಾಡಿಕೊಂಡು ಲಕ್ಷ್ಮಣ,ಹುಲಿಗೆಮ್ನ ಮತ್ತು ಜಮಲಮ್ಮ ಎಂಬುವವರನ್ನು ಬಂಧಿಸಿದ್ದಾರೆ. ನಗರಸಭೆ ವಾರ್ಡ೩೧ ರಲ್ಲಿ ಚುನಾವಣೆ ಘೋಷಣೆಯಾಗಿದ್ದು  ಮದ್ಯ ಮಾರಾಟ ನಿಷೇಧಿಸಲಾಗಿದೆ. ಅದರೂ  ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ಅಬಕಾರಿ,ನೇತಾಜಿ ನಗರ ಪೊಲೀಸರು,ಕಂದಾಯ ಇಲಾಖೆ ಅಧಿಕಾರಿಗಳು ಧಾಳಿ ನಡೆಸಿದ್ದಾರೆ.

Megha News