ಅರಕೇರಾ.ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ 8 ಕುರಿ, 2 ಮೇಕೆಗಳು ಸಾವನ್ನಪ್ಪಿರುವ ಘಟನೆ ನಡದಿದೆ.
ಗ್ರಾಮದ ಭೀಮವ್ವ ಬಸವರಾಜ ಸಿಪಾತಿಗೆ ಸೇರಿದ ಕುರಿಗಳು ಎನ್ನಲಾಗಿದೆ.
ಕುರಿದೊಡ್ಡಿಯಲ್ಲಿಯಲ್ಲಿ ಕುರಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, 8 ಕುರಿ, 2 ಮೇಕೆಗಳು ಸಾವನಪ್ಪಿವೆ.
ಪಶು ಹಾಗೂ ಗ್ರಾಪಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಕುರಿ, ಮೇಕೆ ಸಾವಿನಿಂದ ಬಡ ರೈತ ಭೀಮವ್ವ ಬಸರಾಜ ಸುಮಾರು 60 ಸಾವಿರಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ