ರಾಯಚೂರು,ಡಿ.೩- ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪುರ ಮತ್ತು ಅಮೀನಗಡ ಗ್ರಾಮ ಪಂಚಾಯ್ತಿಯ ಅಭಿವೃದ್ದಿ ಅಧಿಕಾರಿ ರಾಮಪ್ಪ ನಡಗೇರಿ ಎಂಬುವವರನ್ಬು ಕರ್ತವ್ಯ ಲೋಪದ ಆರೋಪದ ಮೇಲೆ ಸೇವೆಯಿಂದ ಅಮಾನತ್ ಗೊಳಿಸಲಾಗಿದೆ.
ಅಮೀನಗಡ ಗ್ರಾಮ ಪಂಚಾಯತ್ತಿಯಲ್ಲಿ ಅಧ್ಯಕ್ಷರ ಡೊಂಗಲ್ ಪಡೆದು ಐದು ಲಕ್ಷ ರೂ ಅನುದಾನ ಬಳಕೆ ಮಾಡಿರುವ ಕುರಿತು ಪಂಚಾಯಿತು ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅಧಾರ ಮೇಲೆ ತನಿಖೆ ಮಾನವಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದರು.ತನಿಖೆಯಲ್ಲಿ ದುರ್ಬಳಕೆ ಆಗಿರುವದು ಕಂಡು ಬಂದಿತ್ತು.ಸ್ಪಷ್ಟನೆ ನೀಡಲು ನೋಟಿಸ್ ಸಹ ಜಾರಿಗೊಳಿಸಲಾಗಿತ್ತು.ಉತ್ತ್ತರ ನೀಡದೇ ಇರುವದರಿಂದ ತನಿಖೆಯನ್ನು ಕಾಯ್ದಿರಿಸಿ ಸೇವೆಯಿಂದ ರಾಮಪ್ಪ ನಡಗೇರಿಯನ್ನು ಅಮಾನತ್ ಗೊಳಿಸಲಾಗಿದೆ.