ರಾಯಚೂರು. 2ನೇ ದಿನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಮಾನವಿ ಶಾಸಕ ಹಂಪಯ್ಯ ನಾಯಕ ಅವರಿಗೆ ಸ್ವಾಗತಿಸುವ ಶಾಸಕರು ಎಂದು ಹೇಳದೇ ಹೆಸರು ಮಾತ್ರ ಪ್ರಸ್ತಾಪಿಸಿ ಏಕ ವಚನದಲ್ಲಿ ಸ್ವಾಗತಿಸಿದ ವೇಳೆ ಕೃಷಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಎಂ.ಹನುಮಂತಪ್ಪ ಅವರನ್ನು ಶಾಸಕ ಹಂಪಯ್ಯ ನಾಯಕ ಅವರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಗರದ ಕೃಷಿ ವಿಶ್ವ ವಿದ್ಯಾಲಯದ ಅವರಣದಲ್ಲಿ
2ನೇ ದಿನ ಕೃಷಿ ಮೇಳಕ್ಕೆ ಕೃಷಿ ಸಚಿವ ಚಲುವರಾ ಯ ಸ್ವಾಮಿ ಅವರು ಉದ್ಘಾಟನೆಗೆ ಆಗಮಿಸಿಸುತ್ತಿದ್ದು, ಸಚಿವರಿಗೆ ವಿಧಾನ ಪರಿಷತ್ ಸದಸ್ಯರಿಗೆ ಎಲ್ಲರಿಗೂ ಸ್ವಾಗತಿಸಿದ್ದು ಈ ವೇಳೆ ವಿಶ್ವ ವಿದ್ಯಾಲಯದ ಉಪಕುಲಪತಿ ಎಂ. ಹನುಮಂತಪ್ಪ ಅವರು ಮಾನವಿ ಶಾಸಕ ಹಂಪಯ್ಯ ನಾಯಕ ಅವರಿಗೆ ಶಾಸಕರು ಎಂದು ಹೇಳದೇ ಅವರಿಗೆ ಏಕವಚನದಲ್ಲಿ ಹೆಸರು ಕರೆದು ಸ್ವಾಗತಿಸಿದರು, ಈ ವೇಳೆ ವೇಧಿಕೆಯಲ್ಲಿ ಯೇ ಉಪ ಕುಲಪತಿ ಎಂ ಹನುಮಂತಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳದಲ್ಲಿಯೇ ಇದ್ದ ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಮಲ್ಲೇಶ ಕೊಲುಮಿ ಅವರು ಕೃಷಿ ವಿವಿ ಉಪ ಕುಲಪತಿ ಎಂ ಹನುಮಂತಪ್ಪ ಅವರಿಗೆ ಗದುರಿಸಿ ಮತ್ತೊಮ್ಮೆ ಅವರನ್ನು ಸ್ವಾಗತಿಸಲು ಸೂಚಿಸಿದರು.
ಆದರೂ ಶಾಸಕ ಹಂಪಯ್ಯ ನಾಯಕ ಅವರ ಉಪ ಕುಲಪತಿ ಅವರ ಮೇಲೆ ಗರಂ ಆದರು.