ರಾಯಚೂರು. ರಾಯಚೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಕಾಲೇಜುಗಳಿಗೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದು 11 ಕಾಲೇಜುಗಳಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಮೂಲಭೂತ ಸೌಕರ್ಯಗಳಿಲ್ಲದಿರುವುದು ಕಂಡು ಬಂದಿದೆ, ಕಾಲೇಜುಗಳಿಗೆ ನೋಟೀಸ್ ಜಾರಿ ಮಾಡಿದ್ದು, ಅವಕಾಶ ನೀಡಲಾಗಿದ್ದು ಒಂದು ವೇಳೆ ಎಲ್ಲಾ ಸೌಕರ್ಯ ಒದಗಿಸಿದಿದ್ದರೆ ವಿವಿ ಮಾನ್ಯತೆ ತೆಗೆದು ಹಾಕಲಾಗುತ್ತದೆ ಎಂದು ರಾಯಚೂರು ವಿಶ್ವ ವಿದ್ಯಾಲಯದ ರಿಜಿಸ್ಟರ್ ಡಾ.ಶಂಕರ್ ವನಿಕಾಳ ಹೇಳಿದರು.
ರಾಯಚೂರು ವಿಶ್ವ ವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರಕಾರ ನಿರ್ದೇಶದ ಮೇರೆಗೆ ಕಾಲೇಜುಗಳಲ್ಲಿ ಉಪನ್ಯಾಸರು, ವಿದ್ಯಾರ್ಥಿಗಳು ಮೂಲಭೂತ ಸೌಲಭ್ಯಗಳು ಒದಗಿಸುವ ಕುರಿತು ಪರಿಶೀಲಿಸಿ ಮಾಡಲು ರಾಯಚೂರು ಮತ್ತು ಯಾದಗಿರಿಯಲ್ಲಿ ರಾಯಚೂರು ವಿವಿ ತಂಡ ಪರಿಶೀಲನೆ ಮಾಡಿದೆ ಎರಡು ಜಿಲ್ಲೆಗಲ್ಲಿ 11 ಕಾಲೇಜುಗಳಿಗೆ ನೋಟೀಸ್ ಜಾರಿ ಮಾಡಿದೆ, ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲ, ವಿದ್ಯಾರ್ಥಿಗಳಿಲ್ಲ, ಸಿಬ್ಬಂದಿಗಳಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಹಾಗೂ ದಾಖಲೆಗಳಿಲ್ಲ ಈ ಎಲ್ಲವುಗಳನ್ನು ಒದಗಿಸಲು ನೋಟೀಸ್ ನೀಡಿದೆ, ಕಾಲಾವಕಾಶ ನೀಡಿದ್ದು, ಇದೀಗ ಮಾನ್ಯತೆ ನೀಡಲು ತಂಡ ತೆರಳಿದ್ದು ಎಲ್ಲಾ ಸೌಲಭ್ಯಗಳು ಇಲ್ಲದೆ ಇರುವವುದು ಕಂಡು ಬಂದಲ್ಲಿ ರಾಯಚೂರು ವಿವಿಯಿಂದ ಮಾನ್ಯತೆಯನ್ನು ತೆಗೆದು ಹಾಕಲಾಗುತ್ತದೆ ಎಂದು ತಿಳಿಸಿದರು.