Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಸಂತಾಪ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಸಂತಾಪ

ರಾಯಚೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನಕ್ಕೆ ಮಾಜಿ ಸಂಸದ ರಾಜಾ ಅಮ ರೇಶ್ವರ ನಾಯಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಗಳಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದು, ಅವರ ಸರಕಾರದಲ್ಲಿ ಕೆಲಸ ನಿರ್ವಹಿಸಿ ನಂತರ ತೋಟ ಗಾರಿಕೆ ಇಲಾಖೆಯ ಸಚಿವರಾಗಿ ಕೆಲಸ ಮಾಡುವ ಭಾಗ್ಯವನ್ನು ಕಲ್ಪಿಸಿದ್ದರು.
ನಂತರ ಆರ್‌ಟಿಪಿಎಸ್ 7 ಮತ್ತು 8 ವಿದ್ಯುತ್ ಘಟಕಗಳು ಅವರ ಕಾಲದಲ್ಲಿಯೇ ಕೆಲಸ ಪ್ರಾರಂಭಿಸಿದ್ದು ಅದರು ಉದ್ಘಾಟನೆಗೆ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಆಗಮಿಸಿ ದ್ದರು. ಅವರೊಬ್ಬ ಸಜ್ಜನ್ ರಾಜಕಾರಣಿಯಾ ಗಿದ್ದರು. ರಾಜಕೀಯದಲ್ಲಿ ಗಾಂಭೀರ್ಯತೆ ಯುಳ್ಳವರಾಗಿದ್ದು ಅವರು ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ.
ರಾಜ್ ಕುಮಾರ ಅಪಹರಣ ಘಟನೆಯನ್ನು ನಿಬಾಯಿಸಿದ ರೀತಿ ಅವರ ರಾಜಕೀಯ ಜಾಣ್ಮೆಗೆ ಉದಾಹರಣೆಯಾಗಿದೆ. ಅವರೊಬ್ಬ ಅಪರೂಪ ಸಜ್ಜನ್ ರಾಜಕಾರಣಿಯಾಗಿದ್ದರು ಎಂದು ವ್ಯಕ್ತಪಡಿಸಿದ್ದಾರೆ.

Megha News