ರಾಯಚೂರು,೧೨- ಕರ್ನಾಟಕ ಲೋಕಸೇವಾ ಅಯೋಗದಿಂದ ನಡೆಸಲಾದ ಪಿಡಿಓ ಪರೀಕ್ಷೆಯಲ್ಲಿ ನಡೆದ ಗೊಂದಲದ ಕುರಿತಾಗಿ ಕೆಪಿಎಸ್ಸಿ ಮೂರು ಜನ ಅಧಿಕಾರಿಗಳ ಉಪ ಸಮಿತಿ ರಚಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಶಶೀಲ್.ಜಿ. ನಮೋಶಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿ ರಾಯಚೂರು ಜಿಲ್ಲೆಯ ಸಿಂಧನೂರು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯಲ್ಲಿ ರೂಂ ನಂಬರ ೫ ರಲ್ಲಿ ಪ್ರಶ್ನೆಪತ್ತಿಕೆ ವಿತರಿಸುವಾಗ ಗೊಂದಲವಾಗಿ ಅಭ್ಯರ್ಥಿಗಳು ಫ್ರಶ್ನೆಪತ್ತಿಕೆ ಸೋರಿಕೆಯಾಗಿದೆ ಎಂದು ತಪ್ಲು ತಿಳುವಳಿಕೆ ಘಟನೆ ನಡೆದಿದೆ. ಸಿಸಿಟವಿ ಅಡಿಯಲ್ಲಿ ಪ್ರಶ್ಬೆಪತ್ತಿಕೆ ವಿತರಿಸಲಾಗಿದೆಯಾವುದೇ ರೀತಿಯ ಸೋರಿಕೆಯಾಗಿಲ್ಲ.ತಪ್ಪು ಮಾಹಿತಿ ರವಾನಿಸಿ ಗೊಂದಲಕ್ಜೆ ಕಾರಣರಾದ ೧೨ ಅಭ್ಯರ್ಥಿಗಳ ವಿರುದ್ದ ಕೇಸ ದಾಖಲಿಸಲಾಗಿದೆ. ಉಪ ಸಮಿತಿ ವರದಿ ನಂತರ ಸಂಬಂದಿಸಿದ ಆಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ೧೨ ಜನ ಅಭ್ಯರ್ಥಿಗಳ ವಿರುದ್ದ ದಾಖಲಾದ ಪ್ರಕರಣ ರದ್ದಿನ ಕುರಿತು ಕ್ರಮವಹಿಸುವದಾಗಿ ಭರವಸೆ ನೀಡಿದ್ದಾರೆ.