ರಾಯಚೂರು. ಅಪ್ರಾಪ್ತ ಬಾಲಕಿಗೆ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಡಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕೋ ಸಿಂಧ ನೂರು ನ್ಯಾಯಾಲಯದಲ್ಲಿ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಮೇ 2019 ರಲ್ಲಿ ನಡೆದ ಪ್ರಕರಣ ದಲ್ಲಿ ಲಿಂಗಸೂಗೂರು ತಾಲೂಕಿನ ಗೋನವಾಟ್ಲಾ ಗ್ರಾಮದ ನಿವಾಸಿ ಹುಲ್ಲೇಶ( 25) ಶಿಕ್ಷೆ ಅನುಭವಿಸಿದ ಆರೋಪಿಯಾಗಿದ್ದಾರೆ.
ನೊಂದ ಅಪ್ರಾಪ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಅಂದಿನ ವೃತ್ತ ನಿರೀಕ್ಷಕ ಯಶವಂತ್ ಹೆಚ್. ಬಿಸ್ನಳ್ಳಿ ಇವರು ಆರೋಪಿತನ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯವು ಸಾಕ್ಷಿ ಪುರಾವೆಗಳನ್ನು ಪರಿಶೀಲಿಸಿ ಆರೋಪಿಯ ಮೇಲಿನ ಅಪಾದನೆ ಸಾಬೀತಾಗಿದೆ ಎಂದು 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ಪೋಕೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಯವರು ಆರೋಪಿತನ ವಿರುದ್ಧ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 15,000 ದಂಡವನ್ನು ವಿಧಿಸಿದೆ, ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ ರೂ.4.50 ಲಕ್ಷ ಪರಿಹಾರ ವನ್ನು ನೀಡಬೇಕೆಂದು ನ್ಯಾಯಾಲ ಯವು ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ. ಮಂಜುನಾಥ ರವರು ವಾದವನ್ನು ಮಂಡಿಸಿದರು. ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಸಮಯಕ್ಕೆ ಸರಿಯಾಗಿ ಕರೆತಂದ ಪೇದೆಗಳಾದ ವಿರೇಶ, ಬಸವರಾಜ, ನಿಂಗಯ್ಯ ಸಹಕರಿಸಿದ್ದಾರೆ.