ರಾಯಚೂರು. ರಾಜ್ಯದಲ್ಲಿ ಬಾಣಂತಿಯ ಸಾವಿನ ಪ್ರಕರಣಗಳು ನಡೆಯುತ್ತಿರುವ ಬೆನ್ನಲ್ಲೆ ರಾಯಚೂರಿನಲ್ಲೂ ಬಾಣಂತಿಯರ ಸಾವಿಗೀಡಾ ಗಿರುವ ಪ್ರಕಣಗಳು ನಡೆದಿದೆ, ಇತ್ತೀಚಿಗೆ ಹೆರಿಯಾದ ಬಾಣಂತಿ ಮೃತಪಟ್ಟಿರು ಘಟನೆ ನಡೆದಿದೆ.
ತಾಲೂಕಿನ ಗಾರಲದಿನ್ನಿ ಗ್ರಾಮದ ಈಶ್ವರಿ (32) ಮೃತ ಬಾಣಂತಿ ಎಂದು ತಿಳಿದು ಬಂದಿದೆ.ಗರ್ಭಿಣಿ ಈಶ್ವರಿಯವರನ್ನು ಮಟಮಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಡಿ. 8 ರಂದು ಈಶ್ವರಿಗೆ ಹೆರಿಗೆಯಾಗಿತ್ತು.ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದ ಬಳಿಕ ರಕ್ತಸ್ರಾವ, ಜ್ವರದಿಂದ ಬಳಲಿದ್ದರು. ಕೂಡಲೆ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಾಣಂತಿ ಈಶ್ವರಿ ಸಾವಿಗೆ ಮಟಮಾರಿ ಪ್ರಾಥ ಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸರಿಯಾಗಿ ಚಿಕಿತ್ಸೆ ನೀಡದೆ ಹಾಗೂ ಸ್ಪಂದಿಸದೆ ಇರುವುದೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.