ರಾಯಚೂರು,ಡಿ.೧೮- ಎಲ್ಲಾ ಸರಕಾರಗಳು ರಾಯಚೂರು ಜಿಲ್ಲೆಯ ಅಭಿವೃದ್ದಿ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ವಿಧಾನಸಭೆ ಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ರಾಜ್ಯಕ್ಕೆ ಶೇ, ೪೦ ರಷ್ಟು ವಿದ್ಯುತ್ ಉತ್ಪಾದಿಸಿ ನೀಡುತ್ತಿದೆ.ದೇಶ ಎಕೈಕ ಹಟ್ಟಿ ಚಿನ್ನ ಗಣಿಯಿಂದ ಚಿನ್ನ ನೀಡುತ್ತಿದೆ. ಆದರೂ ಜಿಲ್ಲೆ ಜನರ ಬದುಕು ಬದಲಾಗುತ್ರಿಲ್ಲ. ಕೃಷ್ಣ ಮತ್ತು ತುಂಗಭದ್ರ ನದಿಗಳಿದ್ದರು ಕುಡಿಯಲು ನೀರಿಲ್ಲ. ಪ್ರತಿ ಬಾರಿಯೂ ಕುಡಿಯುವ, ಕೊನೆ ಭಾಗದವರೈತರ ಜಮೀನಿಗೆ ನೀರು ಪಡೆಯಲು ರಸ್ತೆ ಬಂದ್‌ಮಾಡಿಯೆ ನೀರು ಪಡೆಯಬೇಕಾದ ಸ್ಥಿತಿಯಿದೆ. ಮೂರು ಏತ ನೀರಾವರಿ ಮಂಜೂರುಯಾಗಿವೆಯಾದರೂ ಸಮಸ್ಯೆ ನಿವಾರಿಲ್ಲ.
ಏಷ್ಯಿಯಾ ಖಂಡದಲ್ಲಿ ಮೂರನೆ ದೊಡ್ಡ ಹತ್ತಿ ಮಾರುಕಟ್ಟೆಯಿದ್ದು ರಪ್ತು ಅಗುವ ಗುಣಮಟ್ಟದ ಹತ್ರಿ ಬೆಳಡಯುತ್ತಿದ್ದರು ಹತ್ತಿ ಉತ್ಪನ್ನಗಳ ಕೈಗಾರಿಕೆಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿಲ್ಲ. ಕಲ್ಬುರ್ಗಿಯಲ್ಲಿ ಮೆಘಾ ಟೆಕ್ಸಟೈಲ್ ಪಾರ್ಕ ಮಂಜೂರು ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಉತ್ಪನ್ನಗಳ ಕೈಗಾರಿಕೆ ಸ್ಥಾಪಿಸುತ್ತಿಲ್ಲ.೬೧೯ ಎಕರೆ ಭೂಮಿ ಸ್ವಾಧೀನ ಪಡಿಸಲು ಸಿದ್ದವಾಗಿದೆ. ಇನ್ನೂ ೧೫೦೦ ಎಕರೆ ಭೂಮಿ ಒದಗಿಸಲು ಸಿದ್ದವಿದ್ದು ಟೆಕ್ಸಟೈಲ್ ಪಾರ್ಕರಾಯಚೂರಿನಲ್ಲಿ ಸ್ಥಾಪಿಸಿ ೬೦ ಸಾವಿರ ಉದ್ಯೋಗ ಸೃಷ್ಟಿ ಸಬೇಕು ಎಂದರು.
ಉತ್ಕೃಷ್ಟವಾದ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದರು ಮಾರುಕಟ್ಟೆ ಇಲ್ಲದಂತಾಗಿದೆ.ರಾಯಚೂರು ಎಪಿಎಂಸಿಯಲ್ಲಿ ಮೆಣಸಿನಕಾಯಿ ಮಾರ್ಕೆಟ್ ಪ್ರಾರಂಭಿಸಬೇಕೆಂದರು.
ಶೈಕ್ಷಣಿಕವಾಗಿ ಜಿಲ್ಲೆ ಹಿಂದುಳಿದ್ದು ಜನರು ಉದ್ಯೋಗವಿಲ್ಲದೇ ಗುಳೆ ಹೋಗುತ್ತಿದ್ದು ಶಾಲೆಗೆ ಹೋಗುವ ಮಕ್ಕಳನ್ನು ಸಹ ಕರೆದುಕೊಂಡು ಹೋಗುತ್ತಿದ್ದಾರೆ. ವಸತಿ ಶಾಲೆಗಳು ವಿಶೇಷವಾಗಿ ಪ್ರಾರಂಭಿಸಿಶಿಕ್ಣಣದಿಂದ ವಂಚಿತವಾಗುವ ಮಕ್ಕಳ ಹಿತಕಾಯಬೇಕೆಂದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಜಿಲ್ಲಾವಾರು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದ್ದು ಇಂಡೆಕ್ಸ್ ನಿಯಮ ಬದಲಿಸಿ ಜಿಲ್ಲೆಯನ್ನೂ ಯೂನಿಟ್ ಆಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದರು.
ಕಳೆದ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಗಿದ್ದಾಗ ರಾಯಚೂರು ಸೇರಿದಂತೆ ಏಳು ನಗರದ ಚರಂಡಿ ನಿರ್ಮಾಣ ಕಾಮಗಾರಿ ಟೆಂಡರ ಪಡೆದಿದ್ದ ಕಲ್ಕತ್ತ ಮೂಲದ ಗುತ್ತಿಗೆದಾರ ಪರಾರಿಯಾಗಿದ್ದು ಸಾವಿರಾರು ಕೋಟಿ ಯೋಜನೆ ವಿಫಲವಾಗಿದೆ. ಅದೇ ರೀತಿ ಜಲಧಾರೆ ಯೋಜನೆಯಿದೆ.ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು ಇಂದಿಗೂ ವಿದ್ಯುತ್ ಸಂಪರ್ಕ ಅನುಮತಿ ಪಡೆದಿಲ್ಲ. ಯೋಜನೆಗಳ ಮಂಜೂರಿಯಾದರು ಅನುದಾನ ಬಳಕೆಯಾಗುತ್ತಿಲ್ಲ. ಕೂಡಲೇ ಆಯಾ ಇಲಾಖೆ ಸಚಿವರು ಜಿಲ್ಲಾವಾರು ಶಾಸಕರ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದರು. ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಸಹಮತ ವ್ಯಕ್ತಪಡಿಸಿ ಆಧ್ಯತೆ ಮೇಲೆ ಕ್ರಮ ಜರಗಿಸುವದಾಗಿ ಭರವಸೆ ನೀಡಿದರು.
Megha News > State News > ಎಲ್ಲಾ ಸರಕಾರಗಳಿಂದಲೂ ರಾಯಚೂರಿ ಅನ್ಯಾಯ: ಸದನದಲ್ಲಿ ಧ್ವನಿಯತ್ತಿದ ಶಾಸಕ ಡಾ.ಶಿವರಾಜ ಪಾಟೀಲ
ಎಲ್ಲಾ ಸರಕಾರಗಳಿಂದಲೂ ರಾಯಚೂರಿ ಅನ್ಯಾಯ: ಸದನದಲ್ಲಿ ಧ್ವನಿಯತ್ತಿದ ಶಾಸಕ ಡಾ.ಶಿವರಾಜ ಪಾಟೀಲ
Tayappa - Raichur18/12/2024
posted on
Leave a reply