-
ರಾಯಚೂರು ಡಿ:26: ರಾಯಚೂರು ತಾಲೂಕಿನ ವ್ಯಾಪ್ತಿಯ ಸಿಂಗನೋಡಿ ಹಾಗೂ ಬಾಯಿದೊಡ್ಡಿ ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಇಂದು ಗುರುವಾರ ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಂಡಿರುವ ಚಿಂತಲ್ ಕೆರೆ ಅಮೃತ ಸರೋವರಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ನಂತರ ಸಿಂಗನೋಡಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, .ಮಕ್ಕಳಿಗೆ ಒದಗಿಸುವ ಪೌಷ್ಟಿಕ ಆಹಾರ, ತೂಕ ಹಾಗೂ ದೈಹಿಕ ಬೆಳವಣಿಗೆ ಬಗ್ಗೆ ತಿಳಿದುಕೊಂಡರು.
ನಂತರ ಅಯುಷ್ಮಾನ್ ಭಾರತ ಕೇಂದ್ರಕ್ಕೆ ಭೇಟಿ ನೀಡಿ ಗರ್ಭಿಣಿ ಬಾಣಂತಿಯರು ಮತ್ತು ಹದಿಹರೆಯದವರ ಮಾಹಿತಿ ಪರಿಶೀಲಿಸಿದರು.
ತದನಂತರ ಸಿಂಗನೋಡಿ ತಾಂಡ ರಸ್ತೆ ಬದಿಯಿರುವ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಿದ ಬ್ಲಾಕ್ ಪ್ಲಾಂಟೇಷನ್ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.ನಂತರ ಮಂಡ್ಲಗೇರಾ ಗ್ರಾಮದ ಕೃಷಿ ಕ್ಷೇತ್ರ ಪಿಎಂಜೆಎಸ್ ವೈ ಯೋಜಬೆಯಡಿ ರೈತರ ಸೌಲಭ್ಯ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿರುವುದನ್ನು ವೀಕ್ಷಿಸಿದರು..
ತದನಂತರ ಬಾಯಿದೊಡ್ಡಿ ಗ್ರಾ.ಪಂಗೆ ಭೇಟಿ ನೀಡಿ ಕಾಮಗಾರಿ ಕಡತಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ : ಜಿ.ಪಂ ಯೋಜನಾ ನಿರ್ದೇಶಕ ಶರಣಪ್ಪ ಕೇಸರಟ್ಟಿ, ರಾಯಚೂರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕ ಹನುಮಂತ ಹಾಗೂ ಸಿಡಿಪಿ ಮಹೇಶ ನಾಯಕ, ವಲಯ ಅರಣ್ಯ ಅಧಿಕಾರಿ ನಾಗರಾಜ, ಪಿಡಿಒ ವೆಂಕಟೇಶ, ತಾಂತ್ರಿಕ ಸಿಬ್ಬಂದಿಯವರು, ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Megha News > Local News > ಸಿಂಗನೋಡಿ,ಬಾಯಿದೊಡ್ಡಿ ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಭೇಟಿ: ವಿವಿಧ ಕಾಮಾಗಾರಿ ಪರಿಶೀಲನೆ
ಸಿಂಗನೋಡಿ,ಬಾಯಿದೊಡ್ಡಿ ಗ್ರಾಮ ಪಂಚಾಯಿತಿಗಳಿಗೆ ಜಿ.ಪಂ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ ಭೇಟಿ: ವಿವಿಧ ಕಾಮಾಗಾರಿ ಪರಿಶೀಲನೆ
Tayappa - Raichur26/12/2024
posted on
Leave a reply