Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Crime NewsFeature ArticleLocal News

ವಿದ್ಯಾರ್ಥಿನಿಯ ಬರ್ಬರ ಹತ್ಯೆ: ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ ಸೇರಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲು

ವಿದ್ಯಾರ್ಥಿನಿಯ ಬರ್ಬರ ಹತ್ಯೆ: ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ ಸೇರಿ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲು

ಸಿಂಧನೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಎಸ್ ಸಿ ಫಸ್ಟ್ ಸೆಮ್ ನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ತಾಲ್ಲೂಕು ಹೊರವಲಯದಲ್ಲಿ ಲೇಔಟ್ ವೊಂದರಲ್ಲಿ ಹತ್ಯೆಯಾಗಿರುವ ಘಟನೆ ಗುರುವಾರ ಬೆಳಗ್ಗೆ 10ಗಂಟೆಗೆ ನಡೆದಿದೆ.

ಲಿಂಗಸೂಗುರು ಪಟ್ಟಣದ ಶಿಫಾ ತಂದೆ ಅಬ್ದುಲ್ ವಾಹೀದ್ (24) ಹತ್ಯೆಯಾದ ಯುವತಿ. ಹತ್ಯೆ ಮಾಡಿದವನು ಸಹ ಲಿಂಗಸೂಗುರು ಪಟ್ಟಣದವನಾಗಿದ್ದಾನೆ.

ಬೆಳಗ್ಗೆ 8.55ಕ್ಕೆ ಲಿಂಗಸೂಗುರಿನಿಂದ ಕೆಎಸ್ ಆರ್ ಟಿಸಿ ಬಸ್ ಮೂಲಕ ಸಿಂಧನೂರು ಕಾಲೇಜಿಗೆ ಬಂದಿದ್ದಾಳೆ. ನಂತರ ಅವನು ಸಹ ಬೈಕ್ ನಲ್ಲಿ ಆಕೆಯನ್ನು ಹಿಂಬಾಲಿಸಿ ಕಾಲೇಜುವರೆಗೆ ಬಂದಿದ್ದು, ನಂತರ ಆಕೆಯನ್ನು ಮಾತನಾಡಲು ಕರೆದಿದ್ದಾನೆ. ಯುವತಿಯೂ ಕಾಲೇಜಿಗೆ ಹೋಗುವ ಬದಲು ಆ ಹುಡುಗನೊಂದಿಗೆ ಕಾಲೇಜು ಹತ್ತಿರದ ಲೇಔಟ್ ವೊಂದಕ್ಕೆ ಹೋಗಿದ್ದಾರೆ. ಇಬ್ಬರ ನಡುವೆ ಮಾತುಕತೆ ನಡೆದಿದ್ದು ನಿಗೂಢವಾಗಿದ್ದು, ಚಾಕುವಿನಿಂದ ಯುವತಿಯ ಕತ್ತನ್ನು ಕೊಯ್ದು ಅಲ್ಲಿಂದ ಕಾಲ್ಕಿತ್ತಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಬಿಎಸ್ ತಳವಾರ, ಗ್ರಾಮೀಣ ಠಾಣೆಯ ಸಿಪಿಐ ವೀರಾರೆಡ್ಡಿ, ಬಳಗಾನೂರು ಪಿಎಸ್ಐ ಯರಿಯಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ವೇಳೆಗಾಗಲೇ ಹತ್ಯೆ ಮಾಡಿದ ಆರೋಪಿ ಲಿಂಗಸೂಗುರು ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗತಿಯಾಗಿದ್ದಾನೆ.

ಯುವತಿಯ ಪಾಲಕರು, ಸಂಬಂಧಿಕರು ಆಗಮಿಸಿ ಯುವತಿಯ ಶವ ನೋಡಿ, ಕಣ್ಣೀರಿಟ್ಟರು. ನಂತರ ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಸಂಜೆ ಸಿಂಧನೂರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಸಿಂಧನೂರು ಪೊಲೀಸ್ ಠಾಣೆಯಲ್ಲಿ ಯುವತಿಯ ತಂದೆ ಅಬ್ದುಲ್ ವಾಹೀದ್ ನೀಡಿದ ದೂರಿನ ಮೇರೆಗೆ ಮುಖ್ಯ ಆರೋಪಿ ಮೊಬಿನ್ ಸೇರಿದಂಎತ ಒಂಬತ್ತು ಜನರ ವಿರುದ್ಧ ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿವೈಎಸ್‌ಪಿ ಬಿ.ಎಸ್ ತಳವಾರ ತಿಳಿಸಿದ್ದಾರೆ.

Megha News